ಗಲ್ಫ್ ಆಫ್ ಏಡನ್ ಹಾಗೂ ಸೋಮಲಿಯಾದ ಕರಾವಳಿ ಪ್ರದೇಶದ ಭಾಗದಲ್ಲಿ ಮುಂಬರುವ ತಿಂಗಳಿನಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕಡಲ್ಗಳ್ಳರ ದಾಳಿ ನಡೆಯಲಿದೆ ಎಂದು ಚೀನಾ ಮುನ್ನೆಚ್ಚರಿಕೆ ನೀಡಿದ್ದು, ಆ ನಿಟ್ಟಿನಲ್ಲಿ ಶಿಪ್ಪಿಂಗ್ ಕಂಪನಿಗಳು ಹಡಗುಗಳಲ್ಲಿ ಕಡಲ್ಗಳ್ಳರ ಸಂಭಾವ್ಯ ದಾಳಿ ತಡೆಯುವಲ್ಲಿ ಶಸ್ತ್ರಾಸ್ತ್ರ ಹೊಂದಿರುವುದು ಅಗತ್ಯ ಎಂದು ತಿಳಿಸಿದೆ.
ಗಲ್ಫ್ ಆಫ್ ಏಡನ್ ಮತ್ತು ಸೋಮಾಲಿ ಕರಾವಳಿ ಭಾಗದಲ್ಲಿ ಮಾರ್ಚ್ ತಿಂಗಳಾಂತ್ಯದಿಂದ ಮೇವರೆಗೆ ಕಡಲ್ಗಳ್ಳರಿಂದ ದಾಳಿ ನಡೆಯುವ ಸಾಧ್ಯತೆ ಅಧಿಕವಾಗಿದೆ ಎಂದು ಎಚ್ಚರಿಸಿದೆ. ಅಲ್ಲದೇ ಅದೇ ರೀತಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಈ ಪ್ರದೇಶಗಳಲ್ಲಿ ದಾಳಿ ನಡೆಯುವುದಾಗಿಯೂ ಚೀನಾದ ರಕ್ಷಣಾ ಮೇಲ್ವಿಚಾರಣೆಯ ಸಚಿವಾಲಯದ ಲಿಯೂ ಗೋಂಗ್‌ಚೆನ್ ವಿವರಿಸಿದ್ದಾರೆ.
ಕಳೆದ ವರ್ಷ ಈ ಎರಡು ಅವಧಿಯಲ್ಲಿಯೇ ಸೋಮಾಲಿ ಕಡಲ್ಗಳ್ಳರು 43ಹಡಗುಗಳನ್ನು ಅಪಹರಿಸಿದ್ದರು. ಅಂದರೆ ಸುಮಾರು ಶೇ.74ರಷ್ಟು ದಾಳಿ ನಡೆದಿತ್ತು. ಇದರಲ್ಲಿ ಹಲವು ಅಂತಾರಾಷ್ಟ್ರೀಯ ಉದ್ಯಮಿಗಳ ಹಡಗುಗಳನ್ನು ಭಾರತದ ಕರಾವಳಿ ಪಡೆ ದಾಳಿಯನ್ನು ವಿಫಲಗೊಳಿಸಿತ್ತು.