ವಾಣಿಜ್ಯ ನಗರಿ ಮುಂಬೈ ದಾಳಿ ಸಂಚಿನ ಪ್ರತಿ ಮಾಹಿತಿಯನ್ನು ಸಹ ಆರೋಪಿ ತಹಾವೂರ್ ರಾಣಾ ಕೂಡ ಈ ಸಂಚಿನಲ್ಲಿ ಭಾಗಿ ಎಂದು ತಿಳಿಸಿದ್ದು, ಆತನಿಗೂ ಪ್ರತಿ ಮಾಹಿತಿಯೂ ತಿಳಿದಿರುವುದಾಗಿಪಾಕಿಸ್ತಾನ್ ಮೂಲದ ಅಮೆರಿಕದ ಡೇವಿಡ್ ಹೆಡ್ಲಿ ತಿಳಿಸಿದ್ದಾನೆ.
2006ರ ಜೂನ್‌ನಲ್ಲಿ ಚಿಕಾಗೋಕ್ಕೆ ತೆರಳಿದ ಹೆಡ್ಲಿ ರಾಣಾನನ್ನು ಭೇಟಿಯಾಗಿದ್ದ. ಅಲ್ಲದೇ ಮುಂಬೈ ದಾಳಿ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದ. ಮುಂಬೈನಲ್ಲಿ ವಲಸೆ ಕಚೇರಿಯನ್ನು ಆರಂಭಿಸಿ ತನ್ನ ಕೃತ್ಯಕ್ಕೆ ನೆರವು ನೀಡುವಂತೆಯೂ ಕೋರಿದ್ದ.
2008ರ ಮೇ ಅಂತ್ಯದಲ್ಲಿ ಚಿಕಾಗೋದಲ್ಲಿ ಮತ್ತೆ ಹೆಡ್ಲಿ ರಾಣಾನನ್ನು ಭೇಟಿಯಾಗಿ ಮುಂಬೈ ದಾಳಿ ಸಂಚಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದ್ದ. ದೋಣಿ ಮೂಲಕ ಬಂದರು ತಲುಪುವುದು, ಜಿಪಿಎಸ್ ಸಾಧನದ ಬಳಕೆ ಇತ್ಯಾದಿ ಅಂಶಗಳನ್ನೂ ರಾಣಾ ಜತೆ ಚರ್ಚಿಸಿದ್ದ ಎಂದು ಹೇಳಿದ್ದಾನೆ.
2008ರ ಏಪ್ರಿಲ್‌ನಲ್ಲಿ ಮುಂಬೈ ಬಂದರು ಪ್ರದೇಶದಲ್ಲಿ ಹೆಡ್ಲಿ ದೋಣಿಯಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿದ್ದ. ಅಲ್ಲದೇ ಸಂಭಾವ್ಯ ದಾಳಿ ತಾಣಗಳ ಮಾಹಿತಿಯನ್ನು ಜಿಪಿಎಸ್ ಸಾಧನದಲ್ಲಿ ಸಂಗ್ರಹಿಸಿಟ್ಟಿದ್ದ ಎಂಬುದು ನ್ಯಾಯಾಲಯದ ದಾಖಲೆಗಳಿಂದ ಬಹಿರಂಗವಾಗಿದೆ.