ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೂಢನಂಬಿಕೆ: ಬಾಲಕನನ್ನು ಕೊಂದು,ಮೆದುಳನ್ನೇ ತಿಂದ ಭೂಪ! (Man kills kid | epilepsy cure | Chinese | brain | Sun)
Bookmark and Share Feedback Print
 
ಮೂರ್ಛೆರೋಗ ಗುಣವಾಗುತ್ತೆ ಎಂದು ಬಲವಾಗಿ ನಂಬಿರುವ ಚೀನಾದ ವ್ಯಕ್ತಿಯೊಬ್ಬ 11ರ ಹರೆಯದ ಬಾಲಕನೊಬ್ಬನನ್ನು ಕೊಂದು ಆತನ ಮೆದುಳನ್ನೇ ತಿಂದಿರುವ ರಕ್ತಸಿಕ್ತ ಅಮಾನವೀಯ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಚೀನಾ ನೈರುತ್ಯ ಭಾಗದ ಯುನ್ನಾನ್ ಗ್ರಾಮದ ಕ್ಯುಕ್ಸಿಯಾನ್‌ನ ವಾಂಗ್ ಚಾವೋಕ್ಸು ಎಂಬಾತ 11ರ ಪುಟ್ಟ ಬಾಲಕ ಲಿ ಕ್ಯುಟಾಂಗ್‌ನನ್ನು ಕೊಂದು ಮೆದುಳನ್ನು ತಿಂದ ನಂತರ ಸ್ಥಳೀಯ ಗ್ರಾಮದ ಧಾನ್ಯಬೆಳೆಯುವ ಗದ್ದೆಯಲ್ಲಿ ಹೂತಿದ್ದ ದೇಹ ಪತ್ತೆಯಾಗಿತ್ತು. ಬಾಲಕನ ತಲೆಯ ಮೇಲಿನ ಭಾಗ ಒಡೆದು ಮೆದುಳನ್ನು ಹೊರತೆಗೆದಿದ್ದ ಎಂದು ಪೊಲೀಸರು ತಿಳಿಸಿರುವುದಾಗಿ ಸನ್ ಪತ್ರಿಕೆ ವರದಿ ವಿವರಿಸಿದೆ.

ಪ್ರತ್ಯಕ್ಷದರ್ಶಿಯೊಬ್ಬನ ಮಾಹಿತಿ ಆಧಾರದ ಮೇಲೆ ವಾಂಗ್‌ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಪುರಾಣದ ಕಟ್ಟುಕಥೆಗಳನ್ನು ನಂಬುತ್ತಿರುವ ಈ ಹುಂಬ ಮೆದುಳು, ಎರೆಹುಳ ಹಾಗೂ ಇರುವೆಗಳನ್ನು ತಿಂದರೆ ತನ್ನ ಅಪಸ್ಮಾರ ರೋಗ ಗುಣವಾಗುವುದೆಂದು ಬಲವಾಗಿ ತಿಳಿದಿದ್ದ!
ಸಂಬಂಧಿತ ಮಾಹಿತಿ ಹುಡುಕಿ