ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ಉಗ್ರರಿಂದ ಮೂವರ ಶಿರಚ್ಚೇದ (Taliban | behead | North Waziristan | Pakistan)
Bookmark and Share Feedback Print
 
ಪಾಕಿಸ್ತಾನದ ಆಗ್ನೆಯ ಭಾಗದಲ್ಲಿರುವ ಪೇಶಾವರ್‌ ನಗರದಲ್ಲಿ ತಾಲಿಬಾನ್ ಉಗ್ರರು, ಬುಡಕಟ್ಟು ಪ್ರದೇಶಕ್ಕೆ ಸೇರಿದ ಮೂವರು ವ್ಯಕ್ತಿಗಳ ರುಂಡವನ್ನು ಕತ್ತರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೇಶಾವರ್‌ನಿಂದ 24 ಕೀ.ಮಿ. ದೂರದಲ್ಲಿರುವ ಉತ್ತರ ವಜೀರಿಸ್ತಾನ್‌ನ ಮಿರಾನ್‌ಶಾ ಪಟ್ಟಣದ ಪೂರ್ವಭಾಗದಲ್ಲಿ ಮೃತದೇಹಗಳು ಪತ್ತೆಯಾಗಿವೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಅಮೆರಿಕದ ಸೇನಾಪಡೆಗಳಿಗೆ ತಾಲಿಬಾನಿಗಳ ಕುರಿತಂತೆ ಮಾಹಿತಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ. ಪೊಲೀಸರಿಗೆ, ಅಮೆರಿಕ ಸೇನಾಪಡೆಗಳಿಗೆ ಮಾಹಿತಿ ನೀಡುವವರಿಗೆ ಕೂಡಾ, ಇದೇ ರೀತಿಯ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ

ಕಳೆದ ಎರಡು ವರ್ಷಗಳಿಂದ ಅಮೆರಿಕ ಸೇನಾಪಡೆಗಳಿಗೆ ಮಾಹಿತಿ ರವಾನಿಸುತ್ತಿದ್ದಾರೆ ಎಂದು ಆರೋಪಿಸಿ, ಪಾಕಿಸ್ತಾನದ ಗಡಿಪ್ರದೇಶಗಳಲ್ಲಿ ಹಲವಾರು ಜನರ ರುಂಡವನ್ನು ಕತ್ತರಿಸಿ ಹತ್ತೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ