ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೊಯಿರಾಲಾ ಅಂತ್ಯಸಂಸ್ಕಾರ:ಗಣ್ಯರ ಕಂಬನಿ (Dead|last journey|Girija Prasad Koirala)
Bookmark and Share Feedback Print
 
ಹಿಮಾಲಯ ರಾಷ್ಟ್ರವಾದ ನೇಪಾಳದಲ್ಲಿ ಪ್ರಜಾಪ್ರಭುತ್ವ ಜಾರಿಗೊಳಿಸಲು ನಿರಂತರ ಪ್ರಯತ್ನ ಮಾಡಿದ ಮಾಜಿ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲಾ ಅವರ ಅಂತ್ಯಕ್ರಿಯೆಯಲ್ಲಿ ರಾಜಕಾರಣಿಗಳು, ರಾಯಭಾರಿಗಳು ಸಾವಿರಾರು ಬೆಂಬಲಿಗರು ಉಪಸ್ಥಿತರಿದ್ದು, ಗೌರವ ತೋರಿದರು

ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದ ರೊಯಿರಾಲಾ ಅವರ ಪಾರ್ಥಿವ ಶರೀರವನ್ನು ನೇಪಾಳಿ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯಿಂದ ನಗರದ ಕ್ರೀಡಾಂಗಣದವರೆಗೆ ಮೆರವಣಿಗೆಯಲ್ಲಿ ಕರೆತಂದು ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ನೇಪಾಳದ ಪ್ರಧಾನಿ ಮಾಧವ್ ಕುಮಾರ್,ಮೃತ ಕೊಯಿರಾಲಾ ಅವರ ದೇಹದ ಮೇಲೆ ರಾಷ್ಟ್ರಧ್ವಜವನ್ನು ಹೊದಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳಕ್ಕೆ ಅವರು ನೀಡಿದ ಸೇವೆ ಹಾಗೂ ಪ್ರಜಾಪ್ರಭುತ್ವ ಜಾರಿಗಾಗಿ ಮಾಡಿದ ಹೋರಾಟವನ್ನು ಎಂದಿಗೂ ಮರೆಯಲಾಗದು.ರಾಜವಂಶದ ವಿರುದ್ಧ ಹೋರಾಡಿದ ಅವರ ಹೋರಾಟ ನೇಪಾಳದ ಇತಿಹಾಸದಲ್ಲಿ ರಾರಾಜಿಸಲಿದೆ ಎಂದು ನೇಪಾಳ ಪ್ರಧಾನಿ ಮಾಧವ್ ಕುಮಾರ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ