ಲಾಡೆನ್‌ನನ್ನು 5 ಬಾರಿ ಭೇಟಿ ಮಾಡಿದ್ದ ನವಾಜ್ ಷರೀಪ್:ಖ್ವಾಜಾ
ಲಾಹೋರ್, ಭಾನುವಾರ, 21 ಮಾರ್ಚ್ 2010( 14:45 IST )
PTI
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಹಾಗೂ ನಿಶೇಧಿತ ಉಗ್ರಗಾಮಿ ಸಂಘಟನೆಗಳ ಅಪವಿತ್ರ ಮೈತ್ರಿ ಮತ್ತೊಮ್ಮೆ ಬಹಿರಂಗವಾಗಿದೆ.ಮಾಜಿ ಪ್ರಧಾನಿ ನವಾಜ್ ಷರೀಫ್, ಆಲ್‌ಕೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅವರನ್ನು ಕನಿಷ್ಠ ಐದು ಬಾರಿ ಭೇಟಿಯಾಗಲು ವ್ಯವಸ್ಥೆ ಮಾಡಿರುವುದಾಗಿ ಐಎಸ್‌ಐ ಮಾಜಿ ಮುಖ್ಯಸ್ಥ ಖಾಲೀದ್ ಖ್ವಾಜಾ ಹೇಳಿದ್ದಾರೆ.
ಖಾಸಗಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಆಲ್‌ಕೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಸೇರಿದಂತೆ ವಿಶ್ವದ ಪ್ರಮುಖ ಮುಸ್ಲಿಂ ನಾಯಕರನ್ನು ಮಾಜಿ ಪ್ರಧಾನಿ ಷರೀಫ್ ಭೇಟಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್, ಲಾಡೆನ್‌ರನ್ನು ಕನಿಷ್ಠ ಮೂರು ಬಾರಿ ಭೇಟಿ ಮಾಡಿದ್ದಾರೆ ಎಂದು ಖ್ವಾಜಾ ಬಹಿರಂಗಪಡಿಸಿದ್ದಾರೆ.
ನವಾಜ್ ಷರೀಫ್ ಅವರ ಒತ್ತಾಯದ ಮೇರೆಗೆ, ಸೌದಿ ಅರೇಬಿಯಾದಲ್ಲಿ ಲಾಡೆನ್ ಅವರನ್ನು ಭೇಟಿ ಮಾಡಿಸಿದೆ.ಒಸಾಮಾ ಬಿನ್ ಲಾಡೆನ್ ಅವರಿಂದ ಸುಮಾರು 500 ಮಿಲಿಯನ್ ರೂಪಾಯಗಳಷ್ಟು ಹಣದ ಬೇಡಿಕೆ ಸಲ್ಲಿಸಿದ್ದರು. ಆದರೆ ಲಾಡೆನ್ ಸುಮಾರು 200 ಮಿಲಿಯನ್ ರೂಪಾಯಿಗಳನ್ನು ನೀಡಿದರು ಎಂದು ಖ್ವಾಜಾ ಹೊರಗೆಡುವಿದ್ದಾರೆ.
ಬೇನಜಿರ್ ಭುಟ್ಟೋ ಅವರ ಸರಕಾರವನ್ನು ಉರುಳಿಸಲು ಪಂಜಾಬ್ ಮುಖ್ಯಮಂತ್ರಿಯಾಗಿದ್ದ ನವಾಜ್ ಷರೀಫ್‌ಗೆ,ನಾನೇ ಹಣವನ್ನು ಸರಬರಾಜು ಮಾಡಿರುವುದು ನನಗೆ ಸಂಪೂರ್ಣ ನೆನಪಿದೆ ಎಂದು ಖಾಲಿದ್ ಖ್ವಾಜಾ ಹೇಳಿದ್ದಾರೆ.