ಆಸ್ಟ್ರೇಲಿಯಾದ ಆಗ್ನೇಯ ಭಾಗದಲ್ಲಿ ಪ್ರತಿ ಗಂಟೆಗೆ 200 ಕೀ.ಮಿ ವೇಗದಲ್ಲಿ ಭಾರಿ ಚಂಡುಮಾರುತ ಬೀಸುತ್ತಿದ್ದು,ಹಲವಾರು ಕಟ್ಟಡಳನ್ನು ಧರೆಗೆ ಉರುಳಿ ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಲ್‌ವೈ ಹೆಸರಿನ ಚಂಡುಮಾರುತ ಪ್ರಖ್ಯಾತ ಪ್ರವಾಸಿ ತಾಣವಾದ ಕ್ವೀನ್ಸ್‌ಲ್ಯಾಂಡ್‌ನ ವಿಟ್‌ಸಂಡೇ ದ್ವೀಪಗಳಲ್ಲಿ ಭಾರಿ ಪ್ರಮಾಣದ ಅನಾಹುತ ಸಂಭವಿಸಿದೆ.ಸುಮಾರು 60 ಸಾವಿರ ಮನೆಗಳು ವಿದ್ಯುತ್ ವಂಚಿತವಾಗಿವೆ ಎಂದು ತುರ್ತುಸೇವಾ ಇಲಾಖೆಯ ಸಚಿವ ನೈಲ್ ರಾಬರ್ಟ್ಸ್ ಹೇಳಿದ್ದಾರೆ.
ಆರಂಭದಲ್ಲಿ ಚಂಡುಮಾರುತದ ಪ್ರಭಾವ ಕಡಿಮೆ ಪ್ರಮಾಣದಲ್ಲಿದೆ ಎಂದು ಭಾವಿಸಲಾಗಿತ್ತು. ಆದರೆ ನಂತರದ ಸಮಯದಲ್ಲಿ ಭೀಕರವಾಗಿ ಪರಿಣಮಿಸಿತು ಎಂದು ತಿಳಿಸಿದ್ದಾರೆ.
ಅರ್ಲೈ ಬೀಚ್ ಪಟ್ಟಣದ ಭೂಕುಸಿತದ ನಂತರ ಚಂಡುಮಾರುತದ ತೀವ್ರತೆ ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.