ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಪಾನ್: 20 ವರ್ಷಗಳಲ್ಲಿ 14 ಅಣು ವಿದ್ಯುತ್ ಸ್ಥಾವರ (Japan | nuclear power plants | electricity)
Bookmark and Share Feedback Print
 
ಜಪಾನ್ ದೇಶ ತನ್ನ ಶಕ್ತಿಯ ಮೂಲದ ಅನಿವಾರ್ಯತೆಗಾಗಿ ಇದೀಗ ಮುಂದಿನ 20 ವರ್ಷಗಳೊಳಗೆ 14 ಹೊಸ ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಚಿಂತನೆ ನಡೆಸುತ್ತಿದೆ.

ವರದಿಗಳ ಪ್ರಕಾರ, ವಿಶ್ವದ ಅಎರಡನೇ ಅತೀ ದೊಡ್ಡ ಆರ್ಥಿಕತೆಯನ್ನು ಹೊಂದಿದ ರಾಷ್ಟ್ರ ಜಪಾನ್ ಆದರೂ, ಇಂಧನದ ಮೂಲದ ಬಳಕೆಯ ಪ್ರಮಾಣವೂ ಅಪಾರ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಅಗತ್ಯವಾದ ಶಕ್ತಿ ಉತ್ಪನ್ನ ಮೂಲಗಳು ಮಾತ್ರ ಮುಂದಿನ 20 ವರ್ಷಗಳನ್ನು ಕಡಿಮೆಯಾಗಬಹುದೆಂಬ ಆತಂಕವೂ ಕಾಡುತ್ತಿರುವುದರಿಂದ ಈ ಚಿಂತನೆ ನಡೆಸಲಾಗಿದೆ. ಸದ್ಯದಲ್ಲೇ ಈ ವಿಚರ ಅಧಿಕೃತವಾಗಿ ಹೊರಬೀಳಲಿದೆ ಎಂದು ನಿಕ್ಕಿ ಬ್ಯುಸಿನೆಸ್ ಡೈಲಿ ವರದಿ ಮಾಡಿದೆ.

ಜಪಾನ್ ದೇಶದ ವಿದ್ಯುತ್, ಇಂಧನದ ಅಗತ್ಯತೆಯನ್ನು ಪೂರೈಸಲು ಈಗಾಗಲೇ ದೇಶದಲ್ಲಿ ಒಟ್ಟು 53 ಶಕ್ತಿ ಉತ್ಪಾದನಾ ಕೇಂದ್ರಗಳಿವೆ. ಆದರೆ ಇದು ಕೇವಲ ಅಗತ್ಯದ ಮೂರನೇ ಒಂದು ಭಾಗವನ್ನು ಮಾತ್ರ ಪೂರೈಸುತ್ತದೆ. ಉಳಿದವನ್ನೂ ಪಡೆಯುವುದು ಸದ್ಯದ ಅಗತ್ಯವಾಗಿದೆ.

2020ರ ವೇಳೆಗೆ ಎಂಟು ಹೊಸ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ನಿರ್ಧರಿಸುವ ಜಪಾನ್ ಸರ್ಕಾರ, 2030ರ ವೇಳೆಗೆ ಉಳಿದ ಆರು ಸ್ಥಾವರಗಳನ್ನು ನಿರ್ಮಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ