ರಾಜಧಾನಿಯಲ್ಲಿ ಹೆಚ್ಚುತ್ತಿರುವ ಉಗ್ರರ ಬಂಧನದ ಮಧ್ಯೆಯು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ ಹೋಲಿಸಿದಲ್ಲಿ ಉಗ್ರರಿಗೆ ಬಾಂಗ್ಲಾ ದೇಶ ಸುರಕ್ಷಿತ ತಾಣವಾಗಿ ಪರಿಣಮಿಸಿದೆ ಎಂದು ಉನ್ನತ ಭಧ್ರತಾ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಲಷ್ಕರ್-ಎ-ತೊಯಿಬಾ ಹಾಗೂ ಜೈಷ್ -ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಗಳ ನಾಯಕರನ್ನು ಇತ್ತೀಚೆಗೆ ಢಾಕಾದಲ್ಲಿ ಬಂಧಿಸಲಾಗಿದ್ದು, ಬಾಂಗ್ಲಾದೇಶ ಉಗ್ರರಿಗೆ ಸುರಕ್ಷಿತ ತಾಣವಾಗಿದೆ ಎನ್ನುವ ಸಂಕೇತವಾಗಿದೆ ಎಂದು ನಿವೃತ್ತ ಮೇಜರ್ ಜನರಲ್ ಮುನಿರುಝಾಮಾನ್ ಹೇಳಿದ್ದಾರೆ.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸರಕಾರಗಳು ಉಗ್ರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಉಗ್ರರು ಬಾಂಗ್ಲಾದೇಶದಲ್ಲಿ ಅಡಗಿಕೊಳ್ಳಲು ಹೊಸ ತಾಣಗಳ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.
'ಕೌಂಟರ್ ಟೆರರಿಸಂ ಕ್ಯಾಪಾಸಿಟಿ ಬಿಲ್ಡಿಂಗ್' ಎನ್ನುವ ಅಂತಾರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಂಡ ಭಧ್ರತಾ ತಜ್ಞರು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳಿಗಿಂತ ಬಾಂಗ್ಲಾ ದೇಶ ಸುರಕ್ಷಿತ ತಾಣವಾಗಿ ಭಾವಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಭಯೋತ್ಪಾದನೆ ನಿಗ್ರಹ ದಳವನ್ನು ಹೆಚ್ಚು ಸಶಕ್ತಗೊಳಿಸುವುದು ಅಗತ್ಯವಾಗಿದೆ.ದೇಶದಲ್ಲಿ ಅಂದಾಜು 30 ಉಗ್ರಗಾಮಿ ಸಂಘಟನೆಗಳು ಚಟುವಟಿಕೆ ನಡೆಸುತ್ತಿವೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ ಎಂದು ಮುನಿರುಝಾಮನ್ ತಿಳಿಸಿದ್ದಾರೆ.