ಜ್ವಾಲಾಮುಖಿ: ಐಸ್‌ಲ್ಯಾಂಡ್‌ನಲ್ಲಿ ನೂರಾರು ನಿವಾಸಿಗಳ ಸ್ಥಳಾಂತರ
ರೇಕ್ ಜಾವಿಕ್, ಸೋಮವಾರ, 22 ಮಾರ್ಚ್ 2010( 14:56 IST )
ದಕ್ಷಿಣ ಐಸ್‌ಲ್ಯಾಂಡ್ ಬಳಿ ಅಗ್ನಿಪರ್ವತ ಲಾವಾರಸ ಉಗುಳುತ್ತಿದ್ದು, ಜ್ವಾಲಾಮುಖಿ ಸ್ಫೋಟಿಸುವ ಮುಂಜಾಗ್ರತಾ ಕ್ರಮವಾಗಿ ನೂರಾರು ಸ್ಥಳೀಯ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಶನಿವಾರ ಮಧ್ಯರಾತ್ರಿಯ ಹೊತ್ತಿಗೆ ಅಗ್ನಿ ಪರ್ವತದಿಂದ ಲಾವಾರಸ ಹೊರಗುಗುಳಲಾರಂಭಿಸಿದ್ದು, ಇದು ಐಸ್‌ಲ್ಯಾಂಡ್‌ನ ಐದನೇ ಅತಿ ದೊಡ್ಡ ಅಗ್ನಿಪರ್ವತವಗಿದೆ. ಹೀಗಾಗಿ ಸಮಸ್ಯೆ ಭೀಕರತೆಯನ್ನು ತಳೆಯುವ ಮೊದಲೇ ಪೊಲೀಸರು ನಗರದಲ್ಲಿ ಆಂತಕದ ಪರಿಸ್ಥಿತಿಯನ್ನು ಘೋಷಿಸಿದ್ದು, ಕೂಡಲೇ ಸೈನಿಕರ ನೆರವಿನಿಂದ ಸುತ್ತಮುತ್ತಲ 500ಕ್ಕೂ ಹೆಚ್ಚು ಮಂದಿ ನಿವಾಸಿಗಳನ್ನು ಸ್ಥಳಾಂತರಿಸಲಾಯಿತು.
ಪರಿಸ್ಥಿತಿ ಮಿತಿ ಮೀರುವ ಮೊದಲೇ ನಾಗರಿಕರನ್ನು ಭೀತಿಯಿಂದ ರಕ್ಷಿಸಲಾಗಿರುವುದರಿಂದ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಸ್ಥಳಾಂತರ ಕಾರ್ಯ ಸುಗಮವಾಗಿ ನಡೆದಿದ್ದು, ಯಾವುದೇ ತೊಂದರೆಗಳು ಸಂಭವಿಸಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 2004ರ ನಂತರ ನಡೆಯುವ ಜ್ವಾಲಾಮುಖಿ ಇದಾಗಿದೆ.