ವಿದೇಶೀ ಲೈಂಗಿಕ ಅಪರಾಧಿಗಳಿಗೆ ಗಡಿಪಾರು ಶಿಕ್ಷೆ: ದ.ಕೊರಿಯಾ
ಸಿಯಾಲ್, ಸೋಮವಾರ, 22 ಮಾರ್ಚ್ 2010( 15:33 IST )
ದಕ್ಷಿಣ ಕೊರಿಯಾ ಇದೀಗ ತನ್ನ ವಲಸಿಗರ ನಿಯಮಾವಳಿಗೆ ತಿದ್ದುಪಡಿ ತಂದಿದ್ದು, ಲೈಂಗಿಕವಾಗಿ ತಪ್ಪೆಸಗಿದ ವಿದೇಶೀ ವ್ಯಕ್ತಿಗಳನ್ನು ತನ್ನ ದೇಶದೊಳಗೆ ಬಿಡದಿರಲು ತೀರ್ಮಾನಿಸಿದೆ.
ಹೌದು. ಕೊರಿಯಾ ಸೇರಿದಂತೆ ಇನ್ನಾವುದೇ ದೇಶಗಳಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಇನ್ಯಾವುದೇ ಲೈಂಗಿಕ ಸಂಬಂಧೀ ಅಪರಾಧಗಳಲ್ಲಿ ಪಾಲ್ಗೊಂಡ ವ್ಯಕ್ತಿಗೆ ತನ್ನ ದೇಶದೊಳಕ್ಕೆ ಬಿಡದಿರಲು ದಕ್ಷಿಣ ಕೊರಿಯಾ ತೀರ್ಮಾನಿಸಿದೆ. ಅಷ್ಟೇ ಅಲ್ಲ, ದೇಶಕ್ಕೆ ಆಗಮಿಸಿದ ಮೇಲೆ ಇಂಥ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಿಕ್ಕಿ ಬಿದ್ದಲ್ಲಿ ಕೂಡಾ ಅಂಥವನ್ನು ಗಡಿಪಾರು ಶಿಕ್ಷೆಗೆ ಒಳಪಡಿಸಲು ತೀರ್ಮಾನಿಸಿದೆ.
ದಕ್ಷಿಣ ಕೊರಿಯಾದಲ್ಲಿ 1.1 ಮಿಲಿಯನ್ ವಿದೇಶೀಯರು ವಾಸಿಸುತ್ತಿದ್ದಾರೆ. ವಿದೇಶೀಯರ ಮೇಲಿನ ಅತ್ಯಾಚಾರ ಪ್ರಕರಣಗಳು 2009ರಲ್ಲಿ ಶೇ.11ಕ್ಕೇರಿದೆ. ಹೀಗಾಗಿ ತನ್ನ ವಲಸಿಗರ ನಿಯಮಾವಳಿಗೆ ಇ್ಲಲಿನ ಸರ್ಕಾರ ತಿದ್ದುಪಡಿ ತಂದಿದೆ.