ಶ್ರೀಲಂಕಾದಲ್ಲಿ ಪ್ರಸ್ತುತವಿರುವ ಮತದಾನ ವ್ಯವಸ್ಥೆ ಪ್ರತಿಕೂಲವಾಗಿದ್ದು, ಸಂಸದೀಯ ಮತದಾನ ವ್ಯವಸ್ಥೆಯಲ್ಲಿ ಬಹು ಆಯ್ಕೆಗಳಿರುವುದರಿಂದ ಬಿಕ್ಕಟ್ಟು ಸಷ್ಟಿಸಿದಂತಾಗುತ್ತದೆ ಎಂದು ಪ್ರಧಾನಿ ರತ್ನಾಸಿರಿ ವಿಕ್ರಮಾನಾಯಕೆ ಹೇಳಿದ್ದಾರೆ.
ಪ್ರಸ್ತುತವಿರುವ ಮತದಾನ ವ್ಯವಸ್ಥೆ ಬದಲಿಸಿ, ದೇಶದಲ್ಲಿ ಉತ್ತಮ ರಾಜಕೀಯ ಪರಿಸ್ಥಿತಿಯನ್ನು ಮೂಡಿಸುವಂತಿರಬೇಕು ಎಂದು ಪ್ರಧಾನ ಮಂತ್ರಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಬಹು ಆಯ್ಕೆ ಮತದಾನ ವಿಧಾನದಿಂದ ್ಭ್ಯರ್ಥಿಗಳ ನಡುವೆ ಹಾಗೂ ಮತದಾರರ ಮಧ್ಯೆ ಅನಾರೋಗ್ಯದ ವಾತಾವರಣ ನಿರ್ಮಾಣವಾಗುತ್ತಿದೆ. ಪ್ರಮುಖ ಪಕ್ಷಗಳಲ್ಲಿ ವಿರೋಧಿ ಭಾವನೆಗಳು ಬೆಳೆಯುವಂತೆ ಬಿಕ್ಕಟ್ಟು ಉಂಟಾಗುತ್ತಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತವಿರುವ ಚುವಾನಣೆ ನಿಯಮದ ಪ್ರಕಾರ ಲಂಕಾದ ಮತದಾರ ಪಕ್ಷವನ್ನು ಆಯ್ಕೆ ಮಾಡಿ,ಪಕ್ಷದ ಮೂವರು ಅಭ್ಯರ್ಥಿಗಳಿಗೆ ಮತದಾನ ಮಾಡಬಹುದಾಗಿದೆ.