ಚೀನಾದ ಹಲವೆಡೆ ಸೋಮವಾರ ಮರಳಿನ ಸುನಾಮಿ ಅಪ್ಪಳಿಸಿದ್ದು, ಈ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಚೀನಾದ ಕ್ಸಿಜಿಯಾಂಗ್, ನಿಂಗ್ಸಿಯಾ, ಮಂಗೋಲಿಯೋ ಸೇರಿದಂತೆ ಹಲವೆಡೆ 160ಕ್ಕೂ ಹೆಚ್ಚಿನ ಕಿ.ಮೀ ವೇಗದಲ್ಲಿ ಬೀಸಿದ ಮರಳು ಸುನಾಮಿಯಿಂದ ಹಲವಾರು ಕಟ್ಟಡಗಳು, ಶಾಲೆಗಳು, ಉದ್ಯಮಗಳಿಗೆ ಹಾನಿಯಾಗಿದೆ. ಸಂಪರ್ಕ ವ್ಯವಸ್ಥೆಯೂ ಕುಸಿದಿದೆ.
10 ನಿಮಿಷಕ್ಕೂ ಹೆಚ್ಚಿನ ಕಾಲ ಕಣ್ಣು ತೆರೆಯಲು ಸಾಧ್ಯವಾಗದ ರೀತಿಯಲ್ಲಿ ಬೀಸಿದ ಮರಳ ಸುನಾಮಿಯಿಂದಾಗಿ ಈ ಅವಘಡ ಸಂಭವಿಸಿದೆ. 2006ರಲ್ಲಿಯೂ ಇದೇ ರೀತಿಯ ಮರಳ ಸುನಾಮಿ ಚೀನಾಕ್ಕೆ ಅಪ್ಪಳಿಸಿತ್ತು.