ಬಹರೈನ್ ರಾಜ ಕ್ಯಾಬಿನೆಟ್ ದರ್ಜೆಯ ಸಚಿವರೊಬ್ಬರನ್ನು ಮಾಧ್ಯಮಗಳ ವರದಿಯ ಆಧಾರದಲ್ಲಿ ವ್ಯಾಪಕ ಕಪ್ಪು ಹಣವನ್ನು ಬಿಳಿ ಮಾಡುವ ಕೆಲಸದಲ್ಲಿ ತೊಡಗಿದ್ದರೆಂಬ ಆಪಾದನೆಯ ಮೇಲೆ ಅಮಾನತು ಮಾಡಿದ್ದಾರೆ.
ಮಸೂರ್ ಬಿನ್ ರಜಬ್ ಎಂಬ ಸಚಿವರು 31.6 ಮಿಲಿಯನ್ ಯುಎಸ್ ಡಾಲರ್‌ಗಳಿಂಗಿಂತಲೂ ಹೆಚ್ಚು ಅಕ್ರಮವಾಗಿ ಸಂಪಾದಿಸಿದ ಹಣವನ್ನು ತನ್ನ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಈ ಕಾಯಕ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸ್ಥಳೀಯ ಮಾಧ್ಯಮ ಈ ಕುರಿತು ಬೆಳಕು ಚೆಲ್ಲಿದ್ದ ಹಿನ್ನೆಲೆಯಲ್ಲಿ ಸಚಿವರನ್ನು ಯಾವುದೇ ಕಾರಣ ನೀಡದೆ ಅಮಾನತುಗೊಳಿಸಲಾಗಿದೆ.
ಬಹರೈನ್ ಕಾನೂನಿನಡಿ ಕಪ್ಪು ಹಣವನ್ನು ಬಿಳಿ ಮಾಡುವ ಕಾಯಕದಲ್ಲಿ ತೊಡಗಿದ ಮಂದಿಗೆ ಗರಿಷ್ಠ ಏಳುವರ್ಷಗಳ ಜೈಲು ಶಿಕ್ಷೆ ಹಾಗೂ 2.64 ಮಿಲಿಯನ್ ಯುಎಸ್ ಡಾಲರ್‌ಗಳ ದಂಡ ವಿಧಿಸಲಾಗುತ್ತದೆ.