ಆಕ್‌ಲ್ಯಾಂಡ್: ನ್ಯೂಜಿಲ್ಯಾಂಡ್‌ನಲ್ಲಿ ಭಾರತೀಯ ಮೂಲದ ಟ್ಯಾಕ್ಸಿ ಡ್ರೈವರ್ ಒಬ್ಬಾತನ ಮೇಲೆ ಪ್ರಯಾಣಿಕನೋರ್ವ ಮಾರಣಾಂತಿಕವಾಗಿ ಹಲ್ಲೆ ಮಾಡಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ. ಎರಡು ತಿಂಗಳ ಹಿಂದಷ್ಟೇ ಇಲ್ಲಿ ಭಾರತೀಯ ಚಾಲಕನ ಮೇಲೆ ಇಂಥದ್ದೇ ಹಲ್ಲೆ ಪ್ರಕರಣ ದಾಖಲಾಗಿತ್ತು.
ಮೊಹಿಂದರ್ ಸಿಂಗ್ ಎಂಬ ಟ್ಯಾಕ್ಸಿ ಚಾಲಕರು ತಮ್ಮ ಸೇವೆಯಲ್ಲಿ ಟೌರಂಗ ಸಿಟಿಯಲ್ಲಿದ್ದಾಗ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ನ್ಯೂಜಿಲ್ಯಾಂಡ್ ಹೆರಾಲ್ಡ್ ವರದಿ ಮಾಡಿದೆ. ಈತನ ಜೊತೆಗೇ ಇನ್ನೊಬ್ಬ ಚಾಲಕನ ಮೇಲೂ ಹಲ್ಲೆ ನಡೆದಿದ್ದು, ಅವರ ಕೈಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ.
ಜನವರಿ 31ರಂದು ಇದೇ ಪ್ರದೇಶದಲ್ಲಿ ಭಾರತೀಯ ಮೂಲದ ಹಿರೆನ್ ಮೋಹಿನಿ ಅವರ ಮೇಲೆ ದಾಳಿ ನಡೆದಿತ್ತು. 2008ರಲ್ಲಿ ಭಾರತೀಯರ ಕೊಲೆಯೂ ನಡೆದಿತ್ತು.