ಇಬ್ಬರು ಅನುಭವಿ ತಾಲಿಬಾನ್ ಉಗ್ರರನ್ನು ಇದೀಗ ಪಾಕಿಸ್ತಾನಿ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಉಗ್ರರು ಪ್ರಖ್ಯಾತ ಹೊಟೇಲುಗಳಿಗೆ ದಾಳಿ ನಡೆಸುವ ಹುನ್ನಾರ ನಡೆಸುತ್ತಿದ್ದ ವೇಳೆ ಬಂಧಿಸಲಾಗಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳಿದ್ದಾರೆ.
ರಾವಲ್ಪಿಂಡಿ ಬಳಿಯ ಹೊಟೇಲೊಂದರಲ್ಲಿ ತಂಗಿದ್ದ ಈ ಮಂದಿ ಕೆಲವರು ಖ್ಯಾತ ನಾಮರನ್ನು ಅಪಹರಿಸುವ ಹಾಗೂ ಕೆಲವು ಖ್ಯಾತ ಹೊಟೇಲುಗಳಿಗೆ ದಾಳಿ ನಡೆಸುವ ಹುನ್ನಾರ ನಡೆಸುತ್ತಿದ್ದರು. ಈ ಸಂದರ್ಭ ವ್ಯವಸ್ಥಿತವಾಗಿ ಈ ಇಬ್ಬರನ್ನು ಬಂಧಿಸಲಾಗಿದೆ ಎಂದು ಇಸ್ಲಾಮಾಬಾದ್‌ನ ಹಿರಿಯ ಪೊಲೀಸ್ ಅದಿಕಾರಿ ಬಿನ್ ಯಾಮೀಮ್ ಹೇಳಿದ್ದಾರೆ.
ಬಂಧನಕ್ಕೊಳಗಾದ ಉಗ್ರರು ತಾವು ಖ್ಯಾತ ಹೊಟೇಲುಗಳು ಹಾಗೂ ಕ್ಲಬ್ ಒಂದಕ್ಕೆ ದಾಳಿ ನಡೆಸುವ ಸ್ಕೆಚ್ ರೂಪಿಸುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.