ಲಾಡೆನ್‌ನನ್ನು ಷರೀಫ್ ರಹಸ್ಯವಾಗಿ ಭೇಟಿ ಮಾಡಿಲ್ಲ:ಪಿಎಂಎಲ್
ಕರಾಚಿ, ಮಂಗಳವಾರ, 23 ಮಾರ್ಚ್ 2010( 18:52 IST )
ಮಾಜಿ ಪ್ರದಾನಿ ನವಾಜ್ ಷರೀಫ್ ಬೇನಜಿರ್ ಭುಟ್ಟೋ ಅವರ ಸರಕಾರವನ್ನು ಉರುಳಿಸಲು ಆಲ್‌ಕೈದಾ ನಾಯಕ ಒಸಾಮಾ ಬಿನ್ ಲಾಡೆನ್ ಅವರಿಂದ ಹಣಪಡೆದಿದ್ದರು ಎಂದು ಮಾಜಿ ಐಎಸ್‌ಐ ಮುಖ್ಯಸ್ಥರ ಆರೋಪವನ್ನು ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್ ) ತಳ್ಳಿ ಹಾಕಿದೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥ ಹೇಳಿಕೆಯನ್ನು ನೀಡಿ, ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಲಾಡೆನ್‌ಗೆ ಸುಮಾರು ಐದು ಬಾರಿ ಭೇಟಿ ಮಾಡಲು ವ್ಯವಸ್ಥೆ ಮಾಡಿರುವುದಾಗಿ ಹೇಳಿಕೆ ನೀಡಿದ ನಂತರ ದೇಶದ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.
ದಿವಂಗತ ಮಾಜಿ ಪ್ರಧಾನಿ ಬೇನಜಿರ್ ಭುಟ್ಟೋ ಅವರನ್ನು ಅಧಿಕಾರದಿಂದ ಕೆಳಗಿಳಿಸಲು, ಮಾಜಿ ಪ್ರಧಾನಿ ನವಾಜ್ ಷರೀಪ್ ಆಲ್‌ಕೈದಾ ಮುಖಂಡ ಒಸಾಮಾ ಬಿನ್ ಲಾಡೆನ್ ಅವರಿಂದ ಸುಮಾರು 500 ಮಿಲಿಯನ್ ಡಾಲರ್‌ಗಳಷ್ಟು ಹಣಪಡೆದಿದ್ದರು ಎಂದು ಮಾಜಿ ಐಎಸ್‌ಐ ಮುಖ್ಯಸ್ಥ ಖಾಲೀದ್ ಖ್ವಾಜಾ ಬಹಿರಂಗಪಡಿಸಿದ್ದರು.
ಖಾಲೀದ್ ಖ್ವಾಜಾ ಸದಾ ಇಂತಹ ಆರೋಪಗಳನ್ನು ಮಾಡುವುದರಲ್ಲಿ ಕಾಲ ಕಳೆಯುತ್ತಾರೆ. ನವಾಜ್ ಷರೀಫ್ ಅವರನ್ನು ಲಾಡೆನ್ ಅವರಿಗೆ ಭೇಟಿಯ ವ್ಯವಸ್ಥೆ ಮಾಡುವಷ್ಟು ದೊಡ್ಡವರಲ್ಲ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್ ) ವ್ಯಂಗವಾಡಿದ್ದಾರೆ.