ಅಫ್ಘಾನಿಸ್ತಾನದಲ್ಲಿ ಸ್ಥಿರತೆಯನ್ನು ತರಲು ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮಾತುಕತೆ ನಡೆಸಿವೆ ಎಂದು ನ್ಯಾಟೋ ಪಡೆಗಳ ಮುಖ್ಯಸ್ಥ ಆಂಡ್ರೆಸ್ ಫೊಗ್ ರಾಸ್‌ಮುಸ್ಸೆನ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಶಾಂತಿ ಮಾತುಕತೆಗಳಲ್ಲಿ ಪ್ರಗತಿಯಾಗುತ್ತಿದ್ದು,ಒಂದು ವೇಳೆ ಶಾಂತಿ ಒಪ್ಪಂದ ಏರ್ಪಟ್ಟಲ್ಲಿ ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲಸಲಿದೆ ಎಂದು ಆಂಡ್ರೆಸ್ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರಲು ಉಭಯ ದೇಶಗಳು ಪ್ರಯತ್ನಿಸುತ್ತಿರುವುದು ಸ್ವಾಗತಾರ್ಹ.ಈಗಾಗಲೇ ಇರಾಕ್‌ನಲ್ಲಿ ಸಂಪೂರ್ಣ ಶಾಂತಿ ನೆಲೆಸಿದ್ದು, ಅಭಿವೃದ್ದಿಯತ್ತ ಸಾಗಿದೆ ಎಂದು ನುಡಿದರು.
ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಸಂಬಂಧ ವೃದ್ಧಿಗೆ ಅಫ್ಘಾನಿಸ್ತಾನ ಮಹತ್ವದ ಕೊಂಡಿಯಾಗಿದೆ ಎಂದು ನ್ಯಾಟೋ ಮಿತ್ರಪಡೆಗಳ ಮುಖ್ಯಸ್ಥರು ತಿಳಿಸಿದ್ದಾರೆ.