ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೆಚ್ಚಿದ ಕಾಮಕೇಳಿ: ದಟ್ಟ ಕಾಡಿಗೇ ಕೊಡಲಿಯಿಟ್ಟ ಬ್ರಿಟನ್! (London | Tree | Forest | Unsafe sex)
Bookmark and Share Feedback Print
 
ಲಂಡನ್: ಗಂಟಲು ನೋವಿದೆಯೆಂದು ಕತ್ತನ್ನೇ ಕೊಯ್ದರೆ ಹೇಗೆ ಹೇಳಿ? ಖಂಡಿತಾ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇಂಥದ್ದೇ ಒಂದು ಘಟನೆ ಬ್ರಿಟನ್‌ನಲ್ಲಿ ನಡೆದಿದೆ. ಕಾಡಿನಲ್ಲಿ ಹೆಚ್ಚಿದ ಕಾಮಕೇಳಿಯ ತಡೆಗಾಗಿ ಕಾಡನ್ನೇ ಕಡಿದ ದಾರುಣ ಘಟನೆ ವರದಿಯಾಗಿದೆ.

ಕಾಡಿನ ಪೊದೆಗಳಲ್ಲಿ ಯುವಕ ಯುವತಿಯರ ಅನೈತಿಕ ಚಟುವಟಿಕೆ ಅವ್ಯಾಹತವಾಗಿ ನಡೆಯುತ್ತಿದೆಯೆಂದು 6,000ಕ್ಕೂ ಮರಗಳಿದ್ದ, 12 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿದ್ದ ಸೊಂಪಾದ ಕಾಡನ್ನೇ ಬುಡ ಸಮೇತ ಕತ್ತರಿಸಲಾಗಿದೆ. ಹೆಚ್ಚಿದ ಅಸುರಕ್ಷಿತ ಲೈಂಗಿಕ ಚಟುವಟಿಕೆಯಿಂದಾಗಿ ಯುವಕ ಯುವತಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ಕಾರಣದಿಂದ ಅತ್ತ ಕಾಮಕೇಳಿಯನ್ನು ತಹಬಂದಿಗೆ ತರಲಾಗದೆ, ಆರೋಗ್ಯ ಮತ್ತು ಸುರಕ್ಷತೆ ಇಲಾಖೆ ಕಾಡನ್ನೇ ಬುಡಸಮೇತ ಕತ್ತರಿಸಿದೆ.

ಲ್ಯಾಂಕಶೇರ್‌ನ ದರ್ವೆನ್ ಪಟ್ಟಣದ ಹೊರವಲಯದಲ್ಲಿರುವ 12 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತಾರವಾಗಿ ಹಬ್ಬಿದ್ದ ದಟ್ಟ ಕಾಡಿನಲ್ಲಿ ಹಾಡು ಹಗಲೇ ಎಷ್ಟೋ ಪ್ರೇಮಿಗಳು ತಮ್ಮ ತನುಮನ ಅರ್ಪಿಸುವ ತಾಣವಾಗಿ ಪರಿವರ್ತಿಸಿದ್ದರು. ಅಷ್ಟೇ ಅಲ್ಲ, ಅಪರಿಚಿತ ವ್ಯಕ್ತಿಗಳೊಂದಿಗಿನ ಕಾಮಕೇಳಿಯೂ ಈ ಪ್ರದೇಶದಲ್ಲಿ ಹಬ್ಬಿ, ವ್ಯಾಪಕ ಜಾಲವೇ ಇದರ ಹಿಂದೆ ಕಾರ್ಯ ನಿರ್ವಹಿಸುತ್ತಿತ್ತು. ಹಾಡುಹಗಲೇ ಈ ಪ್ರದೇಶದಲ್ಲಿ ನಡೆವ ಅನೈತಿಕ ಚಟುವಟಿಕೆಗಳಿಂದಾಗಿ ಬೇಸತ್ತ ಜನರು ಹಲವು ಬಾರಿ ಇದರ ವಿರುದ್ಧ ಕೂಗಾಡಿದ್ದರು. ಪೊಲೀಸರು ಸಾಕಷ್ಟು ಬಾರಿ ಈ ಪ್ರದೇಶದಲ್ಲಿ ಹಲವಾರು ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೂ, ಈ ಪ್ರಮಾಣ ಕಡಿಮೆಯಾಗಿರಲಿಲ್ಲ. ಅಲ್ಲದೆ, ವ್ಯಾಪಕವಾಗಿ ಹಬ್ಬುತ್ತಿರುವ ಲೈಂಗಿಕ ರೋಗಗಳ ಭಯದಿಂದಾಗಿ, 6,000ಕ್ಕೂ ಹೆಚ್ಚು ಮರಗಳಿದ್ದ ಸೊಂಪಾದ ಕಾಡಿಗೆ ಕೊಡಲಿಯಿಡಬೇಕಾಯಿತು ಎಂದು ಆರೋಗ್ಯ ಮತ್ತು ಸುರಕ್ಷತೆ ಇಲಾಖೆ ಹೇಳಿದೆ.

ಆದರೆ, ಇಲಾಖೆಯ ಈ ಕ್ರಮ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅನೈತಿಕ ಚಟುವಟಿಕೆ ಹೆಚ್ಚಾಗಿದ್ದಕ್ಕೆ ಸೊಂಪಾಗಿ ಬೆಳೆದಿದ್ದ ಹಚ್ಚಹಸುರಿನ ಪುರಾತನ ಕಾಡಿಗೇ ಕೊಡಲಿಯಿಟ್ಟದ್ದು ಅನ್ಯಾಯ. ಇದು ಪರಿಸರ ನಾಶ ಮಾಡುತ್ತಿರುವುದಕ್ಕೆ ಘೋರ ಉದಾಹರಣೆ ಎಂದು ಹಲವರು ಕಿಡಿ ಕಾರಿದ್ದಾರೆ.

ಆದರೆ ಅಧಿಕಾರಿಗಳು ಕೂಡಾ ತಾವು ಮಾಡಿದ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಕಾಡನ್ನೇ ಕಡಿದಿದ್ದು ಸರಿಯಲ್ಲ ನಿಜ. ಆದರೀಗ ಆ ಪ್ರದೇಶದಲ್ಲಿ ಅನೈತಿಕ ಚಟುವಟಿಕೆಗಳು ನಿಂತಿವೆ ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ