ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾನ್‌‍ನಿಂದ ಲಾಡೆನ್ ಪುತ್ರಿಯ ಬಿಡುಗಡೆ (Bin Laden | Syria | Afghanistan)
Bookmark and Share Feedback Print
 
ಕಳೆದ 2001ರಲ್ಲಿ ಅಫ್ಘಾನಿಸ್ತಾನದಿಂದ ಇರಾನ್‌ಗೆ ಪರಾರಿಯಾಗಿ ಗೃಬಂಧನದಲ್ಲಿದ್ದ ಆಲ್‌ಕೈದಾ ಮುಖಂಡ ಒಸಾಮಾ ಬಿನ್ ಲಾಡೆನ್ ಪುತ್ರಿಯನ್ನು, ಇರಾನ್‌ನಿಂದ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿರಿಯಾದಲ್ಲಿ ತಮ್ಮ ತಾಯಿ, ಸಹೋದರ, ಹಾಗೂ ಆತನ ಪತ್ನಿ ಝೈನಾ ಅಲ್ಸಾಬಾರೊಂದಿಗೆ ಇದೀಗ ವಾಸಿಸುತ್ತಿರುವ ಒಸಾಮಾ ಬಿನ್ ಲಾಡೆನ್ ಪುತ್ರಿ ಇಮಾನ್ ಬಿನ್ ಲಾಡೆನ್, ಆರೋಗ್ಯವಾಗಿದ್ದಾರೆ ಎಂದು ಅವಳ ಸಹೋದರ ಒಮರ್ ತಿಳಿಸಿದ್ದಾರೆ.

2001ರ ಅವಧಿಯಲ್ಲಿ ಅಮೆರಿಕದ ಸೇನಾಪಡೆಗಳು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದಾಗ ಒಸಾಮಾ ಕುಟುಂಬದ ಸದಸ್ಯರು ಇರಾನ್‌ಗೆ ಪಲಾಯನ ಮಾಡಿದ್ದರು. ಆದರೆ ಅಧಿಕಾರಿಗಳು ಅನಧಿಕೃತವಾಗಿ ಇರಾನ್‌ ಪ್ರವೇಶಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಗೃಹಬಂಧನಕ್ಕೆ ಒಳಗಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ