ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆರೋಗ್ಯ ರಕ್ಷಣಾ ಮಸೂದೆಗೆ ಒಬಾಮಾ ಅಂತಿಮ ಸಹಿ (Barack Obama | Bill | health care)
Bookmark and Share Feedback Print
 
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬಹುಚರ್ಚಿತ ಆರೋಗ್ಯ ರಕ್ಷಣಾ ಮಸೂದೆಗೆ ಅಂತಿಮ ಸಹಿ ಹಾಕಿದ್ದಾರೆ. ಇತ್ತೀಚೆಗಷ್ಟೆ, ಈ ಮಸೂದೆ ಸಂಸತ್ತಿನಲ್ಲಿ ಊರ್ಜಿತಗೊಂಡು ಸಾಕಷ್ಟು ಸುದ್ದಿ ಮಾಡಿತ್ತು.

ನಾನು ನನ್ನ ತಾಯಿಯ ಸ್ಮರಣೆಯಲ್ಲಿ ಈ ಸಹಿ ಹಾಕುತ್ತಿದ್ದು, ಆಕೆ ತನ್ನ ಅಂತಿಮ ದಿನಗಳಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ವಿಮಾ ಕಂಪನಿಗಳ ಜೊತೆ ವಾದಕ್ಕಿಳಿದಿದ್ದಳು. ಈ ಹೊಸ ಕಾಯಿದೆ ನನಗೆ ಹರ್ಷ ತರಿಸಿದ್ದು ಇದು ಆಕೆಗೆ ಅರ್ಪಣೆ ಎಂದು ಒಬಾಮಾ ಹೊಸ ಮಸೂದೆ ಸಹಿ ಹಾಕಿದರು.

ಸಹಿ ಹಾಕಿದ ಬಳಿಕ ಮಾತನಾಡಿದ ಒಬಾಮಾ, ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಮೂಲಭೂತ ಆರೋಗ್ಯ ರಕ್ಷಣೆ ದಕ್ಕಬೇಕು. ಕಳೆದ ನೂರು ವರ್ಷಗಳಿಂದ ತರಬೇಕಿದ್ದ ಮಸೂದೆ ಇದೀಗ ಕೊನೆಗೂ ಕಳೆದ ಒಂದು ವರ್ಷದ ವಾದವಿವಾದಗಳ ನಂತರ ಜಾರಿಗೆ ಬರಲಿದೆ. ಇದು ಅಮೆರಿಕದಲ್ಲಿ ದೊಡ್ಡ ಸುಧಾರಣೆ ತರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಹೊಸ ಮಸೂದೆಯಿಂದಾಗಿ ಅಮೆರಿಕದ ಸಮಸ್ತ ಜನತೆ ಆರೋಗ್ಯ ವಿಮೆಯ ಭಾಗ್ಯವನ್ನು ಪಡೆಯಲಿದ್ದು, ಮಿಲಿಯಗಟ್ಟಲೆ ಮಂದಿಗೆ ಆರೋಗ್ಯಕರ ಭವಿಷ್ಯ ಲಭ್ಯವಾಗಲಿದೆ.

ಒಬಾಮಾ ಶೀಘ್ರದಲ್ಲೇ ಈ ಹೊಸ ಕಾನೂನಿನಿಂದ ಆರೋಗ್ಯಕರ ಲಾಭ ದೊರಕಲಿದೆ ಎಂದು ಸಾಮಾನ್ಯ ತಿಳುವಳಿಕೆ ನೀಡುವ ಕಾರ್ಯಕ್ರಮ ರೂಪಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ