ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಸೇನಾಪಡೆಗಳ ಗುಂಡಿಗೆ 10 ಉಗ್ರರು ಬಲಿ (Militants | Pakistan | Clash)
Bookmark and Share Feedback Print
 
ಪಾಕಿಸ್ತಾನದ ಆಗ್ನೇಯ ಭಾಗದಲ್ಲಿರುವ ಬುಡಕಟ್ಟು ಪ್ರದೇಶದಲ್ಲಿ ಸೇನಾಪಡೆಗಳು ಹಾಗೂ ಉಗ್ರರ ಮಧ್ಯೆ ನಡೆದ ಘರ್ಷಣೆಯಲ್ಲಿ 10 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.

ಬುಡಕಟ್ಟು ಪ್ರದೇಶವಾದ ಒರ್ಕಾಝೈ ಪಟ್ಟಣದಲ್ಲಿ ತಾಲಿಬಾನ್ ಉಗ್ರರೊಂದಿಗೆ ನಡೆದ ಘರ್ಷಣೆಯಲ್ಲಿ ಸುಮಾರು 15 ಮಂದಿ ಉಗ್ರರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರದಂದು ಉಗ್ರರ ಅಡಗುತಾಣಗಳ ಮೇಲೆ ನಡೆದ ದ್ರೋಣ್ ದಾಳಿಯಲ್ಲಿ ಕನಿಷ್ಠ ಆರು ಉಗ್ರರು ಸಾವನ್ನಪ್ಪಿದ್ದು, ಹಲವಾರು ಮಂದಿ ಉಗ್ರರು ಗಾಯಗೊಂಡಿದ್ದರು ಎಂದು ಸೇನಾಪಡೆ ಅಧಿಕಾರಿಗಳು ಹೇಳಿದ್ದಾರೆ.

ದೇಶದ ಆಗ್ನೇಯ ಭಾಗದಲ್ಲಿರುವ ತಾಲಿಬಾನ್ ಮತ್ತು ಆಲ್‌ಕೈದಾ ಉಗ್ರರ ಭಧ್ರಕೋಟೆಗಳ ಮೇಲೆ ಪಾಕಿಸ್ತಾನದ ಸೇನಾಪಡೆಗಳು ನಿರಂತರ ದಾಳಿಯನ್ನು ಮುಂದುವರಿಸಿವೆ. ಕೆಲ ಭಾಗಗಳಲ್ಲಿ ಉಗ್ರರನ್ನು ಸದೆಬಡೆಯಲಾಗಿದ್ದು, ಕೆಲವೆಡೆ ಉಗ್ರರು ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಾಕಿಸ್ತಾನ, ಉಗ್ರರು, ಘರ್ಷಣೆ