ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಸ್ಥಿರತೆ ಅಮೆರಿಕೆಗೆ ಮಹತ್ವದ್ದು:ಕ್ಲಿಂಟನ್ (Strategic Dialogue | US | Pak)
Bookmark and Share Feedback Print
 
ಪಾಕಿಸ್ತಾನದ ಸ್ಥಿರತೆ ಅಮೆರಿಕೆಗೆ ಮಹತ್ವದ್ದಾಗಿದೆ. ಉಭಯ ದೇಶಗಳ ನಡುವೆ ಮೈತ್ರಿಯ ಹೊಸದಿನ ಆರಂಭವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹಿಲೆರಿ ಕ್ಲಿಂಟನ್ ಹೇಳಿದ್ದಾರೆ.

ಇಸ್ಲಾಮಿಕ್ ಪ್ರತ್ಯೇಕತಾವಾದಿಗಳ ವಿರುದ್ಧ ಪಾಕ್ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯನ್ನು ಶ್ಲಾಘಿಸಿದ ಕ್ಲಿಂಟನ್, ಉಗ್ರರ ನಿರ್ಮೂಲನೆಗೆ ಅಮೆರಿಕದ ಸಂಪೂರ್ಣ ಬೆಂಬಲವಿದೆ. ಪಾಕಿಸ್ತಾನಕ್ಕೆ ಸ್ಥಿರತೆ ದೊರೆಯುವುದು ಅಮೆರಿಕೆಗೆ ಮಹತ್ವದ್ದಾಗಿದೆ ಎಂದರು.

ಅಮೆರಿಕ ಮತ್ತು ಪಾಕಿಸ್ತಾನದ ಮಧ್ಯೆ ಹೊಸ ದಿನ ಆರಂಭವಾಗಿದೆ.ಒಬಾಮಾ ಅಡಳಿತ ಪಾಕಿಸ್ತಾನಕ್ಕೆ ಸಂಪೂರ್ಣ ನೆರವು ನೀಡಿ ತಮ್ಮ ಮೈತ್ರಿಯನ್ನು ಸಾಬೀತುಪಡಿಸಿದ್ದಾರೆ ಎಂದು ಕ್ಲಿಂಟನ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ನಾಗರಿಕ ಪರಮಾಣು ಒಪ್ಪಂದ ಅಗತ್ಯವಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಕ್ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಷೀರ್, ಭಾರತಕ್ಕೆ ಯಾವುದು ಒಳ್ಳೆಯದಾಗುತ್ತದೆ ಅದು ಪಾಕಿಸ್ತಾನಕ್ಕೆ ಕೂಡಾ ಒಳ್ಳೆಯದಾಗುತ್ತದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ