ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಏರಿಕೆ ಮಾಡಿದ ಶುಲ್ಕವನ್ನು ಹಿಂದಕ್ಕೆ ಪಡೆಯದಿದ್ದಲ್ಲಿ, ಖಾಸಗಿ ಶಾಲೆಗಳನ್ನು ಅನಿರ್ಧಿಷ್ಠಾವಧಿಗೆ ಬಂದ್ ಮಾಡಲಾಗುವುದು ಎಂದು ಮಾವೋವಾದಿಗಳು ಎಚ್ಚರಿಸಿದ್ದಾರೆ.
ದೇಶದ ಖಾಸಗಿ ಶಾಲೆಗಳು ಶುಲ್ಕದ ದರದಲ್ಲಿ ಶೇ.25ರಷ್ಟು ಹೆಚ್ಚಿಸಿದ ಹಿನ್ನೆಲೆಯಲ್ಲಿ , ಸಿಪಿಎನ್ (ಮಾವೋವಾದಿ) ಆಧೀನದ ಆಲ್ ನೇಪಾಳಿ ನ್ಯಾಷನಲ್ ಇಂಡಿಪೆಂಡೆಂಟ್ ಸ್ಟುಡೆಂಟ್ಸ್ ಯುನಿಯನ್ (ಕ್ರಾಂತಿಕಾರಿ)ಸಂಘಟನೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಒಂದು ವೇಳೆ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳವನ್ನು ರದ್ದುಪಡಿಸದಿದ್ದಲ್ಲಿ, ಏಪ್ರಿಲ್ 14 ರಿಂದ ದೇಶಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಂಡು ಖಾಸಗಿ ಶಾಲೆಗಳನ್ನು ಅನಿರ್ಧಿಷ್ಠಾವಧಿಗೆ ಬಂದ್ ಘೋಷಿಸಲಾಗುವುದು ಎಂದು ವಿದ್ಯಾರ್ಥಿ ಸಂಘಟನೆ ಅಕ್ರೋಶ ವ್ಯಕ್ತಪಡಿಸಿದೆ.
ವಿದ್ಯಾರ್ಥಿಗಳನ್ನು ಸಂಪರ್ಕಿಸದೆ ಏಕಪಕ್ಷಿಯವಾಗಿ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ ಎಂದು ಆಲ್ ನೇಪಾಳಿ ನ್ಯಾಷನಲ್ ಇಂಡಿಪೆಂಡೆಂಟ್ ಸ್ಟುಡೆಂಟ್ಸ್ ಯುನಿಯನ್ ಹೇಳಿಕೆ ನೀಡಿದೆ.