ಖ್ಯಾತ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಖ್ಯಾತನಾಮರ ಹೆಸರಿನಡಿ ನಕಟಿ ಟ್ವಿಟರ್ ಖಾತೆ ತೆರೆದು ವಂಚಿಸುತ್ತಿದ್ದ 25ರ ಹರೆಯದ ಯುವಕನೊಬ್ಬನನ್ನು ಫ್ರಾನ್ಸ್ ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಸಂಪರ್ಕ ತಾಣವಾಗಿರು ಟ್ವಿಟರ್ ಮೂಲಕ ಖ್ಯಾತನಾಮರ ಖಾತೆಗಳನ್ನು ತೆರೆದು ಅಮಾಯಕನ್ನು ಈತ ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಣಕ್ಕಾಗಿ ಈ ಕೆಲಸ ಮಾಡದಿದ್ದರೂ, ಈತ ಸುಳ್ಳು ಸಂದೇಶಗಳನ್ನು ರವಾನಿಸುವುದು, ಚಾಲೆಂಜ್ ಆಗಿ ಸ್ವೀಕರಿಸುವಂತೆ ಅವರ ಹೆಸರಿನ ಮೂಲಕ ವ್ಯವಹಾರ ನಡೆಸುವುದು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಹ್ಯಾಕರ್ ಕ್ರೋಲ್ ಎಂಬ ಗುಪ್ತನಾಮ ಹೊಂದಿದ್ದ ಈತನ ಬಗ್ಗೆ ಪೊಲೀಸರಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಸಂಶಯವಿತ್ತು. ಹೀಗಾಗಿ ಆತನನ್ನು ಗಮನಿಸುತ್ತಲೇ ಇದ್ದ ಎಫ್‌ಬಿಐ ದಳ ಮಂಗಳವಾರ ಬಂಧಿಸುವ್ಲಲಿ ಯಶಸ್ವಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.