ಭಾರತ ಪಾಕಿಸ್ತಾನ ನಡುವಿನ ಬಿಕ್ಕಟ್ಟು ನಿವಾರಣೆಗೆ ಅಮೆರಿಕ ಮದ್ಯಸ್ಥಿಕೆ ವಹಿಸುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ಜೊತೆಗೂಡಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಗಳ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್‌ಬ್ರೂಕ್, ಭಾರತದ ಜೊತೆಗಿನ ಪಾಕಿಸ್ತಾನದ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ನೀಡಿದ ಪಾಕ್ ಆಮಂತ್ರಣವನ್ನು ನಿರಾಕರಿಸಿದ್ದು, ಅಮೆರಿಕ ಈ ವಿಚಾರದಲ್ಲಿ ಮಧ್ಯ ಪ್ರದೇಶಿಸುವುದಿಲ್ಲ ಎಂದು ಒಬಾಮಾ ಹೇಳಿದ್ದಾರೆಂದು ತಿಳಿಸಿದರು.
ಭಾರತ ಹಾಗೂ ಪಾಕಿಸ್ತಾನ ತಮ್ಮ ಕಾಶ್ಮೀರ ಕುರಿತ ವಿವಾದವನ್ನು ತಮ್ಮೊಳಗೇ ಮಾತುಕತೆ ನಡೆಸುವ ಮೂಲಕ ಬಗೆಹರಿಸಬೇಕೆಂದು ಒಬಾಮಾ ಹೇಳಿದ್ದಾರೆಂದು ಅವರು ತಿಳಿಸಿದರು.
ಮಾತುಕತೆಗೆ ಸಹಾಯವಾಗುವಂತೆ ಅಮೆರಿಕ ಎರಡೂ ದೇಶಗಳಿಗೆ ಉತ್ಸಾಹ ತುಂಬವ ಕೆಲಸ ಮಾತ್ರ ಮಾಡಲಿದೆ ಎಂದೂ ಅಮೆರಿಕ ಹೇಳಿದೆ. ಭಾರತ ಮತ್ತು ಪಾಕ್ ನಡುವೆ ಸಂಪುಟದರ್ಜೆಯ ಮಾತುಕತೆಯ ಸಭೆಯೊಂದು ನಡೆಯುತ್ತಿರುವುದು ಒಂದು ಉತ್ತಮ ಬೆಳವಣಿಗೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.