ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಹಿಳೆಯರು ಏಳಿಗೆಯಾದಲ್ಲಿ ಕುಟುಂಬಗಳು ಬೆಳಗುತ್ತವೆ:ಹಿಲೆರಿ (Hileri clinton | women | India | Womens day | Leadership)
Bookmark and Share Feedback Print
 
PTI
ಮಹಿಳೆಯರ ಸಬಲೀಕರಣ ಹಾಗೂ ಸ್ವಾತಂತ್ರ್ಯಗಳು ಮಹಿಳೆಯರನ್ನು ಪ್ರವರ್ಧಮಾನಕ್ಕೆ ತರಲು ಸಹಾಯಕವಾಗುತ್ತದೆ. ಮಹಿಳೆಯರು ಏಳಿಗೆಯಾದರೆ, ಕುಟುಂಬಗಳು ಬೆಳಗುತ್ತವೆ. ಕುಟುಂಬಗಳು ಪ್ರವರ್ಧಮಾನಕ್ಕೆ ಬಂದರೆ, ಸಮುದಾಯಗಳು ಮತ್ತು ಆ ಮೂಲಕ ಇಡೀ ದೇಶವೇ ಪ್ರಕಾಶಿಸುತ್ತದೆ. ಮಹಿಳಾ ಸಬಲೀಕರಣದ ಸಾಧನೆಯನ್ನು ಮತ್ತಷ್ಟು ಹೆಚ್ಚಿಸಲು ನಾವು ಪ್ರತಿಯೊಬ್ಬರೂ ಮಹತ್ವದ ಕಾಣಿಕೆ ಕೊಡಬಹುದಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲೆರಿ ಕ್ಲಿಂಟನ್ ಹೇಳಿದ್ದಾರೆ.

ಭಾರತದಲ್ಲಿ ಅಮೆರಿಕಾದ ರಾಯಭಾರಿ ತಿಮೋತಿ ಜೆ.ರೋಮರ್ ಅವರು ಮಹಿಳಾ ಮಾಸಾಚರಣೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಮಹಿಳಾ ನೇತಾರರನ್ನು ಉದ್ದೇಶಿಸಿ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಪತ್ರ ಬರೆದಿದ್ದಾರೆ .

ಆರ್ಥಿಕ-ಸಾಮಾಜಿಕ ಸ್ಥಿರತೆ, ಶಿಕ್ಷಣ, ಅಭಿವೃದ್ಧಿ ಕಾರ್ಯಕ್ರಮ ಹಾಗೂ ಭಾರತದಲ್ಲಿ ಮಹಿಳಾ ಸಮಾನತೆ ಕ್ಷೇತ್ರಗಳಲ್ಲಿ ತಮ್ಮ ಕೊಡುಗೆ ಅಳಿಸಲಾಗದ ಗುರುತು ಮೂಡಿಸಿವೆ. ಭಾರತೀಯ ಸಮಾಜದ ಪ್ರತಿಯೊಂದು ಸ್ಥರದಲ್ಲಿಯೂ ಮಹಿಳೆಯರ ಕೊಡುಗೆಗಳು ಗಮನಾರ್ಹ. ಭಾರತೀಯ ಇತಿಹಾಸದ ಚಿತ್ತಾರವನ್ನು ಹೆಚ್ಚು ಶ್ರೀಮಂತಗೊಳಿಸುವಲ್ಲಿ ಮಹಿಳೆಯರ ಪಾತ್ರವೂ ಬಲು ದೊಡ್ಡದು. ಭಾರತದ ಭವ್ಯ ಭವಿಷ್ಯತ್ತನ್ನು ರೂಪಿಸಲು ಮತ್ತಷ್ಟು ಮಹತ್ವದ ಅವಕಾಶಗಳು ಮಹಿಳೆಯರಿಗೆ ದೊರೆತಿವೆ ಎಂದು ಕ್ಲಿಂಟನ್ ಅಭಿಪ್ರಾಯಪಟ್ಟಿದ್ದಾರೆ.


ಭಾರತಕ್ಕೆ ಕಳೆದ ಜುಲೈ ತಿಂಗಳಲ್ಲಿ ಭೇಟಿ ನೀಡಿದಾಗ, ನಾನು ಹಲವು ಮಹತ್ವದ ನಾಯಕಿಯರನ್ನು ಭೇಟಿ ಮಾಡಿದ್ದೆ, ಅವರಲ್ಲಿ ಕೆಲವರು ಈ ಸಂಜೆಯ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದಾರೆ. ಇಂತಹ ಅಸಾಮಾನ್ಯ ಮಹಿಳಾ ನಾಯಕತ್ವ ಹೊಂದಿರುವ ಭಾರತೀಯರಿಂದ ವಿಶ್ವ ಇನ್ನಷ್ಟು ಅಪೂರ್ವ ಸಾಧನೆಯನ್ನು ನಿರೀಕ್ಷಿಸುತ್ತದೆ.ಮಹಿಳೆಯರು ಸ್ವಾವಲಂಬಿಯಾಗಿ ಬೆಳೆಯುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಆರ್ಥಿಕ ಅಭಿವೃದ್ಧಿ ಹಾಗೂ ಪ್ರಜಾಪ್ರಭುತ್ವದ ಪ್ರಗತಿಗಳೆರಡೂ, ಮಹಿಳೆಯರ ಪ್ರಗತಿಯ ಮೇಲೆ ಅವಲಂಬಿತಾಗಿದೆ ಎಂದು ಇಂದು ಇಲ್ಲಿ ನೆರೆದಿರುವ ನೀವೆಲ್ಲರೂ ಗಮನಿಸಿದ್ದೀರಿ. ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮಹಿಳೆಯರನ್ನು ಸಬಲಗೊಳಿಸುವ, ಶಿಕ್ಷಣ ನೀಡುವ ಹಾಗೂ ಬೆಂಬಲಿಸುವವರಿಂದ ಹಿಡಿದು, ಇಂಥ ಸಮುದಾಯಗಳನ್ನು ಬೆಂಬಲಿಸುವವರು ಅಥವಾ ಇಂಥ ಕಾರ್ಯಕ್ರಮಗಳನ್ನು ಪ್ರಾಯೋಜಿಸುವವರು ಅಥವಾ ಲಿಂಗ ತಾರತಮ್ಯದ ಕುರಿತು ಮಕ್ಕಳಿಗೆ ತಿಳಿ ಹೇಳಿ ಆತ್ಮವಿಶ್ವಾಸ ಹೆಚ್ಚಿಸುವ ನಾವೆಲ್ಲರೂ ಬಲು ಮುಖ್ಯವಾದ ಪಾತ್ರ ವಹಿಸುತ್ತಿದ್ದೇವೆ.

ನಿಮ್ಮ ದೈನಂದಿನ ದುಡಿಮೆ ಮಿಲಿಯಾಂತರ ಜನರಿಗೆ ಪ್ರೇರಣಾದಾಯಿಯಾಗಿರುವಂತೆಯೇ, ಮಹಿಳೆಯರು ಒಟ್ಟಾಗಿ ದುಡಿದಾಗ ಉಂಟುಮಾಡಬಹುದಾದ ಅದ್ಭುತ ಸಾಧನೆಗೆ ಕನ್ನಡಿಯಿದು. ನಾವೆಲ್ಲರೂ ನಮ್ಮ ಭವ್ಯ ಭವಿಷ್ಯತ್ತಿಗಾಗಿ, ನಮ್ಮ ಕುಟುಂಬಗಳಿಗಾಗಿ ಹಾಗೂ ನಮ್ಮ ದೇಶಗಳಾಗಿ ಒಟ್ಟಾಗಿ ದುಡಿದಾಗ ಕಾಣುವ ಅತ್ಯದ್ಭುತ ಸಾಧನೆಯ ಹಕ್ಕಿನೋಟವೂ ಹೌದು. ನಿಮ್ಮ ಸಾಧನೆಗಳಿಗೆ ಮತ್ತೊಮ್ಮೆ ಅಭಿನಂದಿಸುತ್ತನೆ ಎಂದು ಹಿಲೆರಿ ಕ್ಲಿಂಟನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ