ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕೆಗೆ ಮತ್ತೆ ಒಸಾಮಾ ಎಚ್ಚರಿಕೆಯ ಸಂದೇಶ ರವಾನೆ (US|terrorist|terror|Osama|9/11|bin Laden)
Bookmark and Share Feedback Print
 
ಅಮೆರಿಕದ ಟ್ರೇಡ್ ಸೆಂಟರ್‌ ದಾಳಿಯ ರೂವಾರಿಯಾದ ಖಾಲೀದ್ ಶೇಖ್ ಮೊಹಮ್ಮದ್‌‌ನನ್ನು ಒಂದು ವೇಳೆ ಗಲ್ಲಿಗೇರಿಸಿದಲ್ಲಿ, ಅಲ್‌ಕೈದಾ ಉಗ್ರಗಾಮಿ ಸಂಘಟನೆ, ಅಮೆರಿಕನ್ ಸೈನಿಕರ ಮಾರಣಹೋಮ ನಡೆಸಲು ಸಿದ್ಧವಿದೆ ಎಂದು ಕುಖ್ಯಾತ ಭಯೋತ್ಪಾದಕ ಸಂಘಟನೆಯಾದ, ಆಲ್‌ಕೈದಾ ನಾಯಕ ಒಸಾಮಾ ಬಿನ್ ಲಾಡೆನ್ ಎಚ್ಚರಿಸಿದ್ದಾನೆ.

ಅಮೆರಿಕದ ಟ್ರೇಡ್ ಸೆಂಟರ್ ಮೇಲೆ ದಾಳಿಯ ರೂವಾರಿ ಖಾಲೀದ್ ಮೊಹಮ್ಮದ್ ಹಾಗೂ ಇತರ ಆರೋಪಿಗಳನ್ನು ಗಲ್ಲಿಗೇರಿಸುವ ನಿರ್ಧಾರ ತೆಗೆದುಕೊಂಡ ದಿನದಿಂದ, ಕಂಡ ಕಂಡಲ್ಲಿ ಅಮೆರಿಕನ್ ಸೈನಿಕರನ್ನು ಗಲ್ಲಿಗೇರಿಸಲಾಗುವುದು ಎಂದು ಲಾಡೆನ್ ಆಡಿಯೋ ಕ್ಯಾಸೆಟ್‌ನ್ನು ಅಲ್‌ ಜಜೀರಾ ಪ್ರಸಾರ ಮಾಡಿದೆ.


ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಕೂಡಾ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರ ದಾರಿಯಲ್ಲಿ ಸಾಗುತ್ತಿದ್ದಾರೆ ಎಂದು ಒಸಾಮಾ ಬಿನ್ ಲಾಡೆನ್ ಆರೋಪಿಸಿದ್ದಾನೆ.

ಶ್ವೇತಭವನದಲ್ಲಿರುವ ರಾಜಕಾರಣಿಗಳು ನಮ್ಮ ವಿರುದ್ಧ ಅನ್ಯಾಯವೆಸಗುತ್ತಿದ್ದಾರೆ. ವಿಶೇಷವಾಗಿ ಪ್ಯಾಲಿಸ್ತೇನ್ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಿರುವ ಇಸ್ರೇಲ್‌ಗೆ ಅಮೆರಿಕ ಸಂಪೂರ್ಣ ಬೆಂಬಲ ನೀಡಿ ನಮ್ಮ ವಿರುದ್ಧ ಎತ್ತಿ ಕಟ್ಟುತ್ತಿದೆ ಎಂದು ಲಾಡೆನ್ ಆಡಿಯೋ ಕ್ಯಾಸೆಟ್‌ನಲ್ಲಿ ಹೇಳಿಕೆ ನೀಡಿದ್ದಾನೆ.

ದಾಳಿಯ ರೂವಾರಿ ಖಾಲಿದ್ ಮೊಹಮ್ಮದ್ ಹಾಗೂ ಇತರ ನಾಲ್ಕು ಆರೋಪಿಗಳನ್ನು ವರ್ಲ್ಡ್ ಟ್ರೇಡ್ ಸೆಂಟರ್ ಬಳಿಯಿರುವ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲಾಗುವುದು ಎಂದು ಒಬಾಮಾ ಅಡಳಿತ ಹೇಳಿಕೆ ನೀಡಿದ ನಂತರ ಒಸಾಮಾ ಬಿನ್ ಲಾಡೆನ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾನೆ.

ಖಾಲಿದ್ ಶೇಖ್ ಮೊಹಮ್ಮದ್ ಮತ್ತು ಇತರರನ್ನು ಗುಂಟಾನಾಮೊದಲ್ಲಿ ಬಂಧಿಸಲಾಗಿತ್ತು. 2001ರ ಸೆಪ್ಟೆಂಬರ್ 11 ರಂದು ವರ್ಲ್ಡ್‌ ಟ್ರೇಡ್ ಸೆಂಟರ್‌ ದಾಳಿಯಲ್ಲಿ 3ಸಾವಿರ ಜನ ಹತ್ಯೆಯಾಗಿರುವ ಪ್ರಕರಣ ಕುರಿತಂತೆ ಆರೋಪಿಗಳು ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ