ಪಾಕಿಸ್ತಾನದ ವಾಯುವ್ಯ ಭಾಗದ ಅಫ್ಘಾನಿಸ್ತಾನದ ಗಡಿ ಭಾಗದಲ್ಲಿ ಉಗ್ರರ ನಡುವೆ ನಡೆದ ಮಿಲಿಟರಿ ಗುಂಡಿನ ಕಾಳಗದಲ್ಲಿ ಕನಿಷ್ಟ 21 ಉಗ್ರರು ಹಾಗೂ ಐವರು ಸೈನಿಕರು ಹತರಾಗಿದ್ದಾರೆ ಎಂದು ಪಾಕ್ ಮಿಲಿಟರಿ ಹೇಳಿದೆ. ಒರಾಕ್ಜೈ ಎಂಬ ಬುಡಕಟ್ಟು ಮಂದಿಯಿರುವ ಜಿಲ್ಲೆಯಲ್ಲಿ ಈ ಗುಂಡಿನ ಕಾಳಗ ನಡೆದಿದೆ.
ಕಳೆದ ರಾತ್ರಿ ಈ ಜಿಲ್ಲೆಯಲ್ಲಿ ಉಗ್ರವಾದಿಗಳು ದಾಳಿ ನಡೆಸಿ ಚೆಕ್‌ಪೋಸ್ಟ್ ವಶಪಡಿಸಿಕೊಂಡಿದ್ದರು. ಇದರಿಂದ ಚೆಕ್‌ಪೋಸ್ಟ್‌ನಲ್ಲಿದ್ದ ರಕ್ಷಣಾ ಸಿಬ್ಬಂದಿಗೆ ಗಾಯವಾಗಿದ್ದು, ಅವರು ಈ ವಿರುದ್ಧ ಹೋರಾಡಿ ಮತ್ತೆ ಚೆಕ್ ಪೋಸ್ಟ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹೋರಾಟದಲ್ಲಿ 21 ಉಗ್ರರು ಸಾವಿಗೀಡಾಗಿದ್ದು, ಐದು ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ.
ಅಮೆರಿಕದ ಒತ್ತಡದಲ್ಲಿ ಪಾಕಿಸ್ತಾನ ಉಗ್ರವಾದಿಗಳ ವಿರುದ್ಧ ಕಾರ್ಯಾಚರಣೆಯ್ನನು ತೀವ್ರವಾಗಿ ಹೆಚ್ಚಿಸಿದೆ. ಪಾಕಿ- ಅಫ್ಘನ್ ಗಡಿ ಭಾಗದ ಬುಡಕಟ್ಟು ಪ್ರದೇಶಗಳು ಇಡೀ ವಿಶ್ವದಲ್ಲೇ ಅತಿ ಕಷ್ಟಕರ ವಾಸಯೋಗ್ಯ ಪ್ರದೇಶವಾಗಿದೆ ಎಂದು ವಾಷಿಂಗ್ಟನ್ ಕರೆದಿದೆ.