ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯೂಟ್ಯೂಬ್‌ನಲ್ಲಿ ಲೇಡಿ ಗಾಗಾರ ವಿಡಿಯೋಗೆ ಬಿಲಿಯನ್ ಹಿಟ್ ದಾಖಲೆ! (YouTube|Lady GaGa)
Bookmark and Share Feedback Print
 
ಖ್ಯಾತ ಪಾಪ್ ಗಾಯಕಿ ಲೇಡಿ ಗಾಗಾ ಇದೀಗ ಯೂಟ್ಯೂಬ್‌ನಲ್ಲಿ ಒಂದು ಬಿಲಿಯನ್‌ಗೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟ ಮೊದಲ ಪಾಪ್ ಕಲಾವಿದೆಯೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಲೇಡಿ ಗಾಗಾ ಅವರ ಪೋಕರ್ ಫೇಸ್ ವಿಡಿಯೋ 374,606,128 ಹಿಟ್‌ಗಳನ್ನು ಪಡೆದಿದೆ. ಆಕೆಯ ಚೊಚ್ಚಲ ಜಸ್ಟ್ ಡ್ಯಾನ್ಸ್ ವಿಡಿಯೋ 272,941,674 ಹಿಟ್ ಪಡೆದರೆ, ಬ್ಯಾಡ್ ರೊಮ್ಯಾನ್ಸ್ ಎಂಬ ಆಕೆಯ ವಿಡಿಯೋ 360,020,327 ಬಾರ ವೀಕ್ಷಿಸಲ್ಪಟ್ಟಿದೆ.

ಕೇವಲ 24ರ ಹರೆಯದ ಲೇಡಿ ಗಾಗಾ ಈ ಮೂಲಕ ಯೂ ಟ್ಯೂಬ್‌ನಲ್ಲಿ ಒಂದು ಬಿಲಿಯನ್‌ಗೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಆದರೆ, ಈ ಕೀರ್ತಿ ತುಂಬ ದಿನ ಉಳಿಯುವ ಲಕ್ಷಣವಿಲ್ಲ. ಯಾಕೆಂದರೆ ಈಗಾಗಲೇ ಕ್ವಿಲೈಟ್ ಎಂಬ ಮತ್ತೊಂದು ವಿಡಿಯೋ 980 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟು ಯೂ ಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ 2ನೇ ವಿಡಿಯೋ ಎಂಬ ಹೆಗ್ಗಳಿಕೆಯಿದೆ. ಅಲ್ಲದೆ, ಸೌಲ್ಜಾ ಬಾಯ್ ವಿಡಿಯೋ ಕೂಡಾ 860 ಮಿಲಿಯನ್ ಹಿಟ್ ದಾಖಲಿಸಿದೆ. ಹಾಗಾಗಿ ಈ ಎರಡೂ ವಿಡಿಯೋಗಳು ಲೇಡಿ ಗಾಗಾರನ್ನು ಹಿಂದಿಕ್ಕಿದರೆ ಆಶ್ಚರ್ಯವಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯೂಟ್ಯೂಬ್, ಲೇಡಿ ಗಾಗಾ, ಪಾಪ್