ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಿಷೇಧ ಹಿಂತೆಗೆದಲ್ಲಿ 1ಮಿನ್‌ ಅಮೆರಿಕನ್ ಪ್ರವಾಸಿಗರು:ಕ್ಯೂಬಾ (Cuba | US tourists | Travel ban)
Bookmark and Share Feedback Print
 
ಕ್ಯೂಬಾ ರಾಷ್ಟ್ರ ಒಂದು ವೇಳೆ ಅಮೆರಿಕ ಪ್ರವಾಸಿಗರಿಗೆ ಹೇರಿದ ನಿಷೇಧವನ್ನು ಹಿಂತೆಗೆದುಕೊಂಡಲ್ಲಿ, ಆರಂಭಿಕ ವರ್ಷದಲ್ಲಿ 1 ಮಿಲಿಯನ್ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ ಎಂದು ಪ್ರವಾಸೋದ್ಯಮ ಸಚಿವ ಮ್ಯಾನ್‌ವೆಲ್ ಮರ್ರೆರೊ ಹೇಳಿದ್ದಾರೆ.

ಈಗಾಗಲೇ ನೆರೆಯ ರಾಷ್ಟ್ರವಾದ ಮೆಕ್ಸಿಕೊದಲ್ಲಿ ಅಮೆರಿಕನ್ ಪ್ರವಾಸಿಗರಿಗೆ ಅವಕಾಶ ನೀಡಲಾಗಿದ್ದು, ಅಮೆರಿಕನ್ ಪ್ರವಾಸಿಗರು ಕ್ಯೂಬಾ ರಾಷ್ಟ್ರಕ್ಕೆ ಭೇಟಿ ನೀಡಿದಲ್ಲಿ, ದೇಶದ ಪ್ರವಾಸೋದ್ಯಮ ಕ್ಷೇತ್ರದ ಹೂಡಿಕೆಯಲ್ಲಿ ಹಾಗೂ ಇತರ ಕ್ಷೇತ್ರಗಳ ಆರ್ಥಿಕತೆ ಚೇತರಿಕೆಗೆ ನಾಂದಿಯಾಗಲಿದೆ ಎಂದರು.

ಕಳೆದ ವರ್ಷದ ಅವಧಿಯಲ್ಲಿ ಕೆನಡಾ,ಯುರೋಪ್ ಮತ್ತು ಏಷ್ಯಾ ರಾಷ್ಟ್ರಗಳಿಂದ ಸುಮಾರು 2.5 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ.

ಅಮೆರಿಕದ ಪ್ರವಾಸಿಗರಿಗೆ ನಿಷೇಧ ಹಿಂತೆಗೆಯುವಂತೆ ಕುರಿತಂತೆ ಚರ್ಚಿಸಲಾಗುತ್ತಿದ್ದು,ಒಂದು ವೇಳೆ ನಿಷೇಧ ಹಿಂತೆಗೆಯುವಲ್ಲಿ ಯಶಸ್ವಿಯಾದಲ್ಲಿ, ದೇಶದ ಹಿತಾಸಕ್ತಿಗೆ ಹಾಗೂ ಅಮೆರಿಕ ನಾಗರಿಕರಿಗೆ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮಾತನಾಡಿ, ತಮ್ಮದೇ ಆದ ಜನತೆಯ ವಿರುದ್ಧ ರಾಜಕೀಯ ಹಾಗೂ ಮಾನವ ಹಕ್ಕುಗಳ ದಮನವನ್ನು ಮುಂದುವರಿಸುತ್ತಿರುವುದು ಸೂಕ್ತವಲ್ಲ. ವಿದೇಶಾಂಗ ನೀತಿಗಳಲ್ಲಿ ಬದಲಾವಣೆ ತರುವುದು ಅಗತ್ಯವಾಗಿದೆ ಎಂದು ಕಿಡಿಕಾರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ