ಫ್ರಾನ್ಸ್ ಅದ್ಯಕ್ಷ ನಿಕೊಲಸ್ ಸರ್ಕೊಜಿ 2012ರಲ್ಲಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯುವುದು ಬೇಡ.ರಾಜಕೀಯ ಒತ್ತಡಗಳಿಂದಾಗಿ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಸರ್ಕೊಜಿ ಪತ್ನಿ ಕಾರ್ಲಾ ಬ್ರೂನಿ ಹೇಳಿದ್ದಾರೆ.
ಮಡಾಮೆ ಫಿಗಾರೊ ಮ್ಯಾಗ್‌ಜಿನ್ ಸಂದರ್ಶನ ನೀಡಿದ ಬ್ರೂನಿ, ತಮ್ಮ ಹಾಗೂ ನಿಕೊಲಸ್ ಸರ್ಕೊಜಿ ಮಧ್ಯ ಭಿನ್ನಾಭಿಪ್ರಾಯವಿದೆ ಎನ್ನುವ ವರದಿಗಳನ್ನು ತಳ್ಳಿಹಾಕಿದ್ದಾರೆ.ಮಾಧ್ಯಮ ಪ್ರೇರಿತ ರಾಜಕೀಯ ತಮ್ಮ ಪತಿಯನ್ನು ಕ್ರೂರದೃಷ್ಟಿಯಿಂದ ನೋಡುತ್ತಿದೆ ಎಂದು ಆರೋಪಿಸಿದ್ದಾರೆ.
ಸಮತೋಲನ ಸಂತೋಸ ಹಾಗೂ ಆರೋಗ್ಯದ ಬಗ್ಗೆ ಪತಿ ಸರ್ಕೊಜಿ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಆದರೆ ರಾಜಕೀಯ ಒತ್ತಡದಿಂದಾಗಿ ಅವರ ಆರೋಗ್ಯದ ಬಗ್ಗೆ ಗಂಬೀರ ಚಿಂತೆಯಲ್ಲಿ ಜೀವನ ಸಾಗಿಸುತ್ತಿದ್ದೇನೆ ಎಂದು ಟೈಮ್ಸ್ ಆನ್‌ಲೈನ್‌ಗೆ ತಿಳಿಸಿದ್ದಾರೆ.
ಎರಡನೇ ಅವಧಿಗೆ ನಿಕೊಲಸ್ ಸರ್ಕೊಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಬಯಸುತ್ತಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾರ್ಲಾ, ಅವರ ಪತ್ನಿಯಾಗಿ ನಾನು ಅಧ್ಯಕ್ಷರಾಗಿ ಮುಂದುವರಿಯುವುದು ನನಗಿಷ್ಟವಿಲ್ಲ.ನನಗೆ ಅವರ ಆರೋಗ್ಯದ ಬಗ್ಗೆ ಆತಂಕವಾಗಿದೆ. ಮುಂದಿನ ಜೀವನವನ್ನು ಶಾಂತರೀತಿಯಲ್ಲಿ ನೆಮ್ಮದಿಯಿಂದ ಬಾಳಲು ಬಯಸುವುದಾಗಿ ತಿಳಿಸಿದ್ದಾರೆ.