ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ಪ್ಯಾಮ್ ಇಮೇಲ್ ರವಾನೆಯಲ್ಲಿ ಭಾರತ ವಿಶ್ವದ ನಂ.2 (Spam Email | America | India)
Bookmark and Share Feedback Print
 
ಜಗತ್ತಿನಲ್ಲಿಯೇ ಸ್ಪ್ಯಾಮ್ ಇಮೇಲ್‌ಗಳನ್ನು ಉತ್ಪತ್ತಿ ಮಾಡುವ ರಾಷ್ಟ್ರಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ.

ಒಟ್ಟು ಸ್ಪ್ಯಾಮ್ ಇಮೇಲ್‌ಗಳ ಪೈಕಿ ಶೇ.10.98ರಷ್ಟು ಸ್ಪ್ಯಾಮ್ ಇಮೇಲ್‌ಗಳು ಭಾರತದಿಂದ ಕಳುಹಿಸಲ್ಪಡುತ್ತದೆ ಎಂದು ವರದಿಯೊಂದು ತಿಳಿಸಿದ್ದು, ಮೊದಲ ಸ್ಥಾನದಲ್ಲಿ ಬ್ರೆಜಿಲ್ ಇದೆ.

ಬ್ರೆಜಿಲ್ ನಂತರದ ಸ್ಥಾನದಲ್ಲಿ ಕ್ರಮವಾಗಿ ಭಾರತ, ವಿಯೆಟ್ನಾಂ, ಕೊರಿಯಾ ಹಾಗೂ ಅಮೆರಿಕಾಗಳಿವೆ. ಈ ಐದು ರಾಷ್ಟ್ರಗಳಿಂದ ಅತಿ ಹೆಚ್ಚು ಸ್ಪ್ಯಾಮ್ ಇಮೇಲ್‌ಗಳು ಇದೇ 2010ರ ಮೊದಲ ಎರಡು ತಿಂಗಳುಗಳಲ್ಲಿ ರವಾನೆಯಾಗಿದೆ ಎಂದು ವರದಿಯಾಗಿದೆ.

ಈ ಅಧ್ಯಯನಕ್ಕಾಗಿ ಪಾಂಡಾ ಲ್ಯಾಬ್ಸ್ 50 ಲಕ್ಷ ಇಮೇಲ್‌ಗಳನ್ನು ಪರಿಶೀಲಿಸಿತ್ತು. ನಗರಗಳ ಪೈಕಿ ಅತಿ ಹೆಚ್ಚು ಸ್ಪ್ಯಾಮ್ ಇಮೇಲ್‌ಗಳನ್ನು ಕಳುಹಿಸಿದ ನಗರವಾಗಿ ಸಿಯೋಲ್ ಹೊರಹೊಮ್ಮಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಪ್ಯಾಮ್ ಇ ಮೇಲ್, ಅಮೆರಿಕ