ಜಾಗತಿಕವಾಗಿ ಏರುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಮಾ.27ರ ಶನಿವಾರ ವಿಶ್ವ ಭೂದಿನವಾಗಿ ಆಚರಿಸುತ್ತಿದ್ದು, ಇಡೀ ವಿಶ್ವದ ಪ್ರಮುಖ ನಗರಗಳಲ್ಲಿ ಒಂದು ಗಂಟೆ ಕಾಲ ವಿದ್ಯುತ್ ಸ್ಥಗಿತಗೊಳಿಸಿ 'ಅರ್ಥ್ ಅವರ್' ಆಚರಿಸಲಾಗುತ್ತಿದೆ.
ಜಾಗತಿಕ ತಾಪಮಾನದ ಕುರಿತು ಅರಿವು ಮೂಡಿಸುವ ಈ ಕಾರ್ಯಕ್ರಮ ಆರಂಭವಾಗಿ ನಾಲ್ಕು ವರ್ಷಗಳಾಗಿದ್ದು, ಇದೀಗ ನಾಲ್ಕನೇ ಬಾರಿ ಈ ಹಿಂದೆ ನಡೆದದ್ದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಭೂದಿನವನ್ನು ಆಚರಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಬಾರಿ ಭೂದಿನವನ್ನು ಭಾರತವೂ ಸೇರಿದಂತೆ 125 ದೇಶಗಳು ಆಚರಿಸುತ್ತಿದ್ದು, ಸಾವಿರಾರು ನಗರಗಳು ಒಂದು ಗಂಟೆ ಕಾಲ ವಿದ್ಯುದ್ದೀಪಗಳನ್ನು ಆಚರಿಸಿ ಕತ್ತಲೆಯಲ್ಲಿ ಮುಳುಗಲಿವೆ. ಕಳೆದ ವರ್ಷ ಈ ಕಾರ್ಯಕ್ರಮದಲ್ಲಿ 88 ದೇಶಗಳು ಭಾಗವಹಿಸಿದ್ದವು.
2009ರಲ್ಲಿ ಭಾರತವೂ ಈ ವಿಶ್ವಮಟ್ಟದ ಕಾರ್ಯಕ್ರಮದ್ಲಲಿ ಭಾಗಿಯಾಗಿತ್ತು. ಭಾರತದ ಐದು ಮಿಲಿಯನ್ ಮಂದಿ ಒಂದು ಗಂಟೆಯ ಕಾಲ ಕತ್ತಲೆಯಲ್ಲಿದ್ದರು. 56 ನಗರಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ 1,000 ಮೆಗಾವ್ಯಾಟ್ ವಿದ್ಯುಚ್ಛಕ್ತಿಯನ್ನು ಒಂದೇ ಗಂಟೆಯಲ್ಲಿ ಉಳಿಸಿದ್ದರು!
ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಕೋಪನ್‌ಹೇಗನ್‌ನಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದ ಬಹುದೊಡ್ಡ ಸಮಾವೇಶದ ಪರಿಣಾಮದಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹಲವಾರು ದೇಶಗಳು ಈ ಕಾರ್ಯಕ್ಕೆ ಕೈಜೋಡಿಸುತ್ತಿವೆ ಎಂದು ಲೆಕ್ಕಾಚಾರ ಹಾಕಲಾಗಿದೆ.
ಗ್ಲೋಬಲ್ ಅರ್ಥ್ ಅವರ್ ಕಾರ್ಯಕ್ರಮದ ಸಂಸ್ಥಾಪಕ ಆಂಡಿ ರಿಡ್ಲಿ ಹೇಳುವಂತೆ, ಕಳೆದ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಈ ಭೂದಿನ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಅತ್ಯಂತ ಉತ್ತಮ ಪ್ರತಿಕ್ರಿಯೆ ಬಂದಿದೆ. ಕಳೆದ ವರ್ಷಕ್ಕಿಂತ ಬಹುದೊಡ್ಡ ಪ್ರಮಾಣದ್ಲಲಿ ಇದು ನಡೆಯುತ್ತಿದೆ. ಆದರೆ ಕೆಲವರು ಇಂಥ ವಿಷಯವನ್ನೂ ರಾಜಕೀಯಕ್ಕಾಗಿ ಹಳಸುತ್ತಿರುವುದು ವಿಷಾದನೀಯ. ಆದರೂ ಜನರು ಮಾತ್ರ ಉತ್ಸಾಹದಿಂದ ಇದರಲ್ಲಿ ಪಾಲ್ಗೊಳ್ಳುವುದು ಸಂತಸದ ವಿಷಯ ಎನ್ನುತ್ತಾರೆ.
ಮಾರ್ಚ್ 27ರಂದು ರಾತ್ರಿ 8.30ಕ್ಕೆ ಜಗತ್ತಿನ ಲೈಟ್‌ಗಳೆಲ್ಲ ಆಫ್ ಆಗಲಿವೆ. 1,200ಕ್ಕೂ ಹೆಚ್ಚು ವಿಶ್ವವಿಖ್ಯಾತ ಕಟ್ಟಡಗಳೂ ತಮ್ಮೆಲ್ಲಾ ಲೈಟ್‌ಗಳನ್ನು ಆಫ್ ಮಾಡಿ ಈ ಕಾರ್ಯಕ್ರಮದ ಮೂಲಕ ಜಾಗತಿಕ ತಾಪಮಾನದ ಅರಿವು ಮೂಡಿಸಲು ಕೈಜೋಡಿಸಿವೆ. ದುಬೈನ ವಿಶ್ವವಿಖ್ಯಾತ ಬೃಹತ್ ಕಟ್ಟಡ ಬುರ್ಜ್ ಕ್ಯಾಲಿಫಾ, ಸಿಡ್ನಿಯ ಹಾರ್ಬರ್ ಬ್ರಿಡ್ಜ್, ಒಪೆರಾ ಹೌಸ್‌ಗಳು, ಈಜಿಫ್ಟ್‌ನ ಪಿರಾಮಿಡ್‌ಗಳು, ಪೀಸಾ ಟವರ್, ಐಫೆಲ್ ಟವರ್ ಸೇರಿದಂತೆ ವಿಶ್ವವಿಖ್ಯಾತ ಕಟ್ಟಡಗಳು, ಸ್ಥಳಗಳಲ್ಲಿ ಕೂಡಾ ಲೈಪ್ ಪೂರ್ತಿ ಆಫ್ ಆಗಿ ಕತ್ತಲ ಸಾಮ್ರಾಜ್ಯದಲ್ಲಿ ಕೈಜೋಡಿಸಲಿವೆ.
ಗೂಗಲ್, ಕೋಕಾಕೋಲಾ, ಹಿಲ್ಟನ್, ಮೆಕ್‌ಡೊನಾಲ್ಡ್, ಕ್ಯಾನಾನ್, ಎಸ್‌ಎಸ್‌ಬಿಸಿ ಮತ್ತಿತರ ಬಹುರಷ್ಟ್ರೀಯ ಕಂಪನಿಗಳು ಕೂಡಾ ಈ ಅರ್ಥ್ ಅವರ್ ಕಾರ್ಯಕ್ರಮವ್ನನು ಪ್ರಚಾರಗೊಳಿಸಲಿವೆ.