ಉಭಯ ದೇಶಗಳ ನಡುವಣ ಹೆಚ್ಚುತ್ತಿರುವ ಉದ್ರಿಕ್ತತೆಯಿಂದಾಗಿ, ಪಾಕಿಸ್ತಾನ ಹೆಚ್ಚುವರಿ ಸೇನಾಪಡೆಗಳನ್ನು ಭಾರತದ ಗಡಿಭಾಗಗಳಲ್ಲಿ ನಿಯೋಜಿಸಿದೆ ಎಂದು ಇಂಗ್ಲೆಂಡ್‌ನಲ್ಲಿರುವ ಪಾಕ್ ರಾಯಭಾರಿ ವಾಜಿದ್ ಶಮ್‌ಸುಲ್ ಹಸನ್ ಹೇಳಿದ್ದಾರೆ.
ಲಂಡನ್ ಮೂಲದ ಫೈನಾನ್ಶಿಯಲ್ ಟೈಮ್ಸ್‌ಗೆ ನೀಡಿದ ಸಂದರ್ಷನದಲ್ಲಿ ಮಾತನಾಡಿದ ಹಸನ್, ಪಾಕಿಸ್ತಾನಕ್ಕೆ ತಾಲಿಬಾನ್ ಉಗ್ರರ ವಿರುದ್ಧ ಹೋರಾಡುವ ಸಾಮರ್ಥ್ಯವಿದೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಉನ್ನತ ಅಧಿಕಾರಿಗಳ ಪ್ರಕಾರ, ಭಾರತೊಂದಿಗೆ ಹೆಚ್ಚುತ್ತಿರುವ ಉದ್ರಿಕ್ತತೆಯಿಂದಾಗಿ ಸೇನಾಪಡೆಗಳನ್ನು ಗಡಿಭಾಗಗಳಿಗೆ ರವಾನಿಸಿದ್ದು,ತಾಲಿಬಾನ್ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಸೇನಾಪಡೆಗಳು ರವಾನಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಪಾಕ್ ಸರಕಾರ ಹೆಚ್ಚಿನ ಸೇನಾಪಡೆಗಳನ್ನು ಭಾರತ -ಪಾಕ್ ಗಡಿಭಾಗಗಳಿಗೆ ರವಾನಿಸುವುದು ಅಗತ್ಯವಾಗಿದೆ.ನಮ್ಮ ಸೈನಿಕರ ಆತ್ಮಸ್ತೈರ್ಯ ದ ಕೊರತೆಯಾಗಲು ಅವಕಾಶ ನೀಡಬಾರದು ಎಂದು ಹಸನ್ ಅಭಿಪ್ರಾಯಪಟ್ಟಿದ್ದಾರೆ.