ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿದ್ಯಾರ್ಥಿ ಜೊತೆ ಲೈಂಗಿಕ ಹಗರಣ: ಶಿಕ್ಷಕಿ ದೋಷಮುಕ್ತ (Seducing student | Teresa McKenzie | Sex)
Bookmark and Share Feedback Print
 
16ರ ಹರೆಯದ ವಿದ್ಯಾರ್ಥಿಯೊಬ್ಬನ ಜೊತೆ ಲೈಂಗಿಕ ಸಂಪರ್ಕ ನಡೆಸಿದ ಆರೋಪದಿಂದ ಶಿಕ್ಷಕಿಯನ್ನು ನ್ಯಾಯಾಲಯ ನಿರ್ದೋಷಿ ಎಂದು ಹೇಳುವ ಮೂಲಕ ದೋಷಮುಕ್ತಗೊಳಿಸಿದೆ.

ತೆರೆಸಾ ಮೆಕೆನ್ಸೀ (39) ಎಂಬ ಶಿಕ್ಷಕಿಯನ್ನು ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ಕೆಲಸದಿಂದ ವಜಾ ಮಾಡಲಾಗಿತ್ತು. ಆಕೆಯ ಇಬ್ಬರು ಮಕ್ಕಳನ್ನು ಸಮಾಜ ಸೇವಾ ಇಲಾಖೆಯ ಸುಪರ್ದಿಗೆ ಒಪ್ಪಿಸಲಾಗಿತ್ತು. ವಿಶೇಷ ಗಮನದ ಅಗತ್ಯವಿರುವ 16 ವರ್ಷದ ವಿದ್ಯಾರ್ಥಿಯೊಂಗಿದೆ ಈ ಶಿಕ್ಷಕಿ ಬ್ರಿಟೀಷ್ ಲೈಬ್ರರಿ, ಪಂಚತಾರಾ ಹೊಟೇಲ್ ಹಾಗೂ ತನ್ನ ಕಾರಿನೊಳಗೆ ಲೈಂಗಿಕ ಚಟುವಟಿಕೆ ನಡೆಸಿದ್ದಾರೆ ಎಂದು ದೂರು ದಾಖಲಾಗಿತ್ತು. ಈ ಪ್ರಕರಣ ದೇಶದಲ್ಲಿ ಭಾರೀ ಸುದ್ದಿ ಮಾಡಿತ್ತು.

ಸುಮಾರು 50 ನಿಮಿಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಧೀಶರು, ಶಿಕ್ಷಕಿಯ ವಿರುದ್ಧದ ಆಱೋಪದಲ್ಲಿ ಯಾವುದೇ ಹುರುಳಿಲ್ಲ. ಆಕೆ ಸಂಪೂರ್ಣ ದೋಷಮುಕ್ತಳು ಎಂದು ತೀರ್ಪು ನೀಡಿದೆ.

ಬಿಡುಗಡೆಯ ನಂತರ ಮಾತನಾಡಿದ ಶಿಕ್ಷಕಿ, ಕಳೆದೆರಡು ವರ್ಷ ನನ್ನ ಜೀವನ ಅತ್ಯಂತ ಯಾತನಾಮಯವಾಗಿತ್ತು. ಯಾವುದೇ ತಪ್ಪಿಲ್ಲದಿದ್ದರೂ ಅನ್ಯಾಯವಾಗಿ ನಾನು ಈ ದೂರನ್ನು ಸಹಿಸಬೇಕಾಯ್ತು. ಆ ಹುಡುಗನಿಗೆ ಹೆಚ್ಚಿನ ನಿಗಾ ಅಗತ್ಯವಿತ್ತು. ಅದನ್ನು ಶಿಕ್ಷಕಿಯಾಗಿ ನೀಡಬೇಕಾದ್ದು ನನ್ನ ಕರ್ತವ್ಯ. ಆತನನ್ನು ಸರಿಹಾದಿಗೆ ತರುವ ನಿರ್ಧಾರ ತೆಗೆದುಕೊಳ್ಳುವಾಗಲೇ ಇದು ಅತ್ಯಂತ ರಿಸ್ಕ್ ಎಂದು ನನಗೆ ತಿಳಿದಿತ್ತು. ಆದರೂ ಆ ಹುಡುಗನ ಭವಿಷ್ಯಕ್ಕಾಗಿ ತೆಗೆದುಕೊಂಡೆ ಎಂದು ಕಣ್ಣೀರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ