ಮುಂಬೈಯಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಸೇನಾಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಬಂಧಿತ ಅಮೆರಿಕಾದ ಶಂಕಿತ ಭಯೋತ್ಪಾದಕ ಡೇವಿಡ್ ಹೆಡ್ಲಿ ಬಹಿರಂಗಪಡಿಸಿದ್ದಾನೆ.
ಮುಂಬೈನ ಮೂರು ಸ್ಥಳಗಳಲ್ಲಿ ನಡೆದ ಉಗ್ರರ ದಾಳಿಯ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಹಾಗೂ ಉಗ್ರರಿಗೆ ನಿರ್ದೇಶನ ನೀಡುವ ಸಂಚಿನಲ್ಲಿ ಸೇನಾಧಿಕಾರಿಗಳು ಪಾಲ್ಗೊಂಡಿದ್ದರು ಎಂದು ಹೆಡ್ಲಿ ಮೊದಲ ಬಾರಿಗೆ ಬಹಿರಂಗಪಡಿಸಿದ್ದರಿಂದ, ಪಾಕ್ ಕೈವಾಡವಿರುವುದು ಸ್ಪಷ್ಟವಾಗಿದೆ.
ಪಾಕಿಸ್ತಾನದ ಸೇನಾಧಿಕಾರಿಗಳಾದ ಮೇಜರ್ ಸಯ್ಯದ್, ಮೇಜರ್ ಇಕ್ಬಾಲ್, ಮೇಜರ್ ಸಮೀರ್ ಮತ್ತು ಕರ್ನಲ್ ಶಾ ಭಾಗಿಯಾಗಿದ್ದರು ಎಂದು ಹೆಡ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಹೆಡ್ಲಿ ತಪ್ಪೊಪ್ಪಿಗೆಯೊಂದಿಗೆ, ಜಾಗತಿಕ ಉಗ್ರಗಾಮಿ ಸಂಘಟನೆಯಾದ ಆಲ್‌ಕೈದಾ ಮತ್ತು ಲಷ್ಕರ್-ಎ-ತೊಯಿಬಾ ಹಾಗೂ ಪಾಕಿಸ್ತಾನ ಸೇನೆಯ ಅಪವಿತ್ರ ಮೈತ್ರಿ ಬಹಿರಂಗವಾದಂತಾಗಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಮೂಲಗಳು ತಿಳಿಸಿವೆ.
ಮುಂಬೈ ಉಗ್ರರ ದಾಳಿಯಲ್ಲಿ ತಮ್ಮ ಪಾತ್ರವಿರುವುದಾಗಿ ಡೇವಿಡ್ ಹೆಡ್ಲಿ, ಚಿಕಾಗೊ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದು ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ಹೆಡ್ಲಿ ಸಲ್ಲಿಸಿದ ಕ್ಷಮಾದಾನ ಪತ್ರದ ಪ್ರಕಾರ 2008ರಲ್ಲಿ ನಡೆದ ಮುಂಬೈ ಉಗ್ರರಾ ದಾಳಿಗೆ ನೆರವಾಗಿದ್ದಲ್ಲದೆ, ಅಮೆರಿಕ, ಪಾಕಿಸ್ತಾನ ಮತ್ತು ಭಾರತಕ್ಕೆ ಸುಮಾರು ಏಳು ವರ್ಷಗಳ ಕಾಲ ತೆರಳಿದ್ದು, ಸುಮಾರು ಐದು ಬಾರಿ ಪಾಕಿಸ್ತಾನದಲ್ಲಿರುವ ಉಗ್ರರ ತರಬೇತಿ ಶಿಬಿರದಲ್ಲಿ ತರಬೇತಿಯನ್ನು ಪಡೆದಿರುವುದಾಗಿ ಹೇಳಿಕೆ ನೀಡಿದ್ದಾನೆ.