ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ಕ್ಯಾನರ್ ಮೂಲಕ ಬೆತ್ತಲೆ ಚಿತ್ರ: ಸಹನೌಕರನ ಅಶ್ಲೀಲ ಕಾಮೆಂಟ್! (X-ray scanner | naked | nude images | Heathrow airport)
Bookmark and Share Feedback Print
 
ಅಶ್ಲೀಲವಾಗಿ ನನ್ನ ಬಗ್ಗೆ ಕಾಮೆಂಟು ಮಾಡಿದ್ದಾನೆಂದು ಆರೋಪಿಸಿ 29ರ ಹರೆಯದ ಏರ್‌ಪೋರ್ಟ್ ಸೆಕ್ಯುರಿಟಿ ಕೆಲಸದಾಕೆ ತನ್ನ ಸಹ ಕೆಲಸಗಾರನ ಮೇಲೆ ಕಾನೂನು ಸಮರಕ್ಕೆ ಸನ್ನದ್ಧಳಾಗಿದ್ದಾಳೆ.

ಇಲ್ಲಿನ ಹೆಥ್ರೂ ಏರ್‌ಪೋರ್ಟ್‌ನಲ್ಲಿ ಪೂರ್ಣ ದೇಹದ ಎಕ್ಸ್‌ರೇ ಸ್ಕ್ಯಾನರ್ ಮೂಲಕ ಆಕೆ ತಪ್ಪಾಗಿ ಹಾಯ್ದು ಹೋದ ಸಂದರ್ಭ ಆಕೆಯ ಜೊತೆಗೆ ಕೆಲಸ ಮಾಡುತ್ತಿದ್ದಾತ, ಆಕೆಯ ಬೆತ್ತಲೆ ಚಿತ್ರ ಪ್ರಿಂಟ್ ಮಾಡಿ ಅಸಭ್ಯವಾಗಿ ಕಾಮೆಂಟ್ ಮಾಡಿದ್ದ. ಇದರಿಂದ ಜರ್ಝರಿತಳಾಗಿ ಆಕೆ ಕಾನೂನಿನ ಮೊರೆ ಹೋಗಿದ್ದು, ತನ್ನ ಸಹೋದ್ಯೋಗಿ ನನ್ನ ಖಾಸಗಿ ಹಕ್ಕು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

ವಿಮಾನ ನಿಲ್ದಾಣದಲ್ಲಿ ಬಾಡಿ ಸ್ಕ್ಯಾನರ್ ವಿಭಾಗದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ 25ರ ಹರೆಯದ ಜಾನ್ ಲೇಕರ್ ತನ್ನ ಸಹೋದ್ಯೋಗಿ ಸೆಕ್ಯುರಿಟಿ ಗಾರ್ಡ್ ಮಾರ್ಗೆಟ್‌ಸನ್ ಅಕಸ್ಮಾತಾಗಿ ಆ ಸ್ಕ್ಯಾನರ್ ಮೂಲಕ ಹಾದುಹೋದಾಗ ಆಕೆಯ ಎದೆಯ ಭಾಗದ ಬೆತ್ತಲೆ ಚಿತ್ರವನ್ನು ಪ್ರಿಂಟ್ ಮಾಡಿದ್ದ. ಜೊತೆಗೆ ಆಕೆಯೆಡೆಗೆ ತಿರುಗಿ ಆಕೆಯ ಬಗ್ಗೆ ಅಸಭ್ಯವಾದ ಕಾಮೆಂಟನ್ನೂ ಮಾಡಿದ್ದ. ಇದರಿಂದ ಅವಮಾನಿತಳಾದ ಆಕೆ ಆತನ ಕಾಮೆಂಟನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂಥ ಪ್ರಕರಣ ಮುಂದೆ ಯಾರಿಗೂ ಯಾವತ್ತೂ ನಡೆಯಬಾರದೆಂಬ ಉದ್ದೇಶದಿಂದ ಆಕೆ ಕಾನೂನು ಸಮರಕ್ಕೆ ಹೊರಟಿದ್ದಾಳೆ ಎಂದು ಮಾರ್ಗೆಟ್‌ಸನ್ ಗೆಳತಿ ದಿ ಸನ್ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.

ಫುಲ್ ಬಾಡಿ ಸ್ಕ್ಯಾನರ್ ಮೂಲಕ ಪ್ರಯಾಣಿಕರ ಸಂಪೂರ್ಣ ದೇಹದ ಚಿತ್ರ ತೆಗೆಯಲಾಗುವ ಮೂಲಕ ಗೌಪ್ಯವಾಗಿ ಇರಿಸುವ ಅಸ್ತ್ರಗಳನ್ನು ಪತ್ತೆಹಚ್ಚಲಾಗುತ್ತದೆ. ಭಯೋತ್ಪಾನಾ ಸುರಕ್ಷತೆಯ ಹಿನ್ನೆಲೆಯಲ್ಲಿ ಇದನ್ನು ವಿಮಾನನಿಲ್ದಾಣಗಳಲ್ಲಿ ಇರಿಸಲಾಗಿದೆ. ಮಾನವನ ದೇಹವನ್ನು ಪೂರ್ಣವಾಗಿ ಸ್ಕ್ಯಾನ್ ಮಾಡಿ ಈ ಎಕ್ಸ್-ರೇ ಯಂತ್ರವು ಚಿತ್ರವನ್ನು ಹೊರ ಹಾಕುತ್ತದೆ. ಅದನ್ನು ಭದ್ರತಾ ಅಧಿಕಾರಿಗಳು ಪರಿಶೀಲಿಸಿದ ಬಳಿಕ ತಕ್ಷಣವೇ ನಾಶಪಡಿಸಲಾಗುತ್ತದೆ ಮತ್ತು ಇದು ಪ್ರಯಾಣಿಕರ ಗೋಪ್ಯತೆಗೆ ಯಾವುದೇ ರೀತಿಯಲ್ಲಿ ಅಡ್ಡಿಯುಂಟುಮಾಡದು ಎಂದು ಬ್ರಿಟಿಷ್ ಸಾರಿಗೆ ವಿಭಾಗದ ಕಾರ್ಯದರ್ಶಿ ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ ಅದಾದ ಕೆಲವೇ ದಿನಗಳಲ್ಲಿ ಬಾಲಿವುಡ್ ನಟ ಇದೇ ವಿಮಾನ ನಿಲ್ದಾಣದ್ಲಲಿ ತನ್ನ ಅಭಿಮಾನಿ ಮಹಿಳೆಯರಿಬ್ಬರಿಗೆ ತನ್ನ ನಗ್ನ ಚಿತ್ರಕ್ಕೆ ಸಹಿ ಮಾಡಿಕೊಟ್ಟಿರುವುದಾಗಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಇದೀಗ ಅದರ ಬೆನ್ನಲ್ಲೇ ಇಂಥದ್ದೊಂದು ಕಿರುಕುಳ ನಡೆದಿರುವುದು ಈ ಎಕ್ಸ್‌ರೇ ಸ್ಕ್ಯಾನರ್‌ನ ಅವಾಂತರಗಳಿಗೆ ತಾಜಾ ಉದಾಹರಣೆ.
ಸಂಬಂಧಿತ ಮಾಹಿತಿ ಹುಡುಕಿ