ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗೊರಕೆ ಹೊಡೆದಿದ್ದಕ್ಕೆ ಕೊಲೆ!: ಆರೋಪಿಗೆ ಮರಣದಂಡನೆ (Chinese university | Snoring | Death Sentence)
Bookmark and Share Feedback Print
 
ಗೊರಕೆ ಹೊಡೆದ ಕ್ಷುಲ್ಲಕ ಕಾರಣವೊಂದಕ್ಕಾಗಿ ತನ್ನ ರೂಮ್‌ಮೇಟ್‌ನನ್ನು ಇರಿದು ಕೊಲೆ ಮಾಡಿದ ಚೀನಾದ ವಿಶ್ವವಿದ್ಯಾನಿಲಯವೊಂದರ ವಿದ್ಯಾರ್ಥಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ನೀಡಿದೆ.

ಜಿಲಿನ್ ಪಟ್ಟಣದ ಈಶಾನ್ಯ ಭಾಗದಲ್ಲಿರುವ ಚಾಂಗ್‌ಚುಂಗ್ ಕೋರ್ಟ್‌ 24ರ ಹರೆಯದ ಗ್ಯು ಲಿವೇ ತನ್ನ ರೂಮ್ ‌ಮೇಟ್ ಝಾವೋ ಯಾನ್ ಎಂಬಾತ ತೀವ್ರವಾಗಿ ಗೊರಕೆ ಹೊಡೆಯುತ್ತಿದ್ದಾನೆಂಬ ಕಾರಣಕ್ಕೆ ಆತನನ್ನು ಕಳೆದ ನವೆಂಬರ್ ತಿಂಗಳಲ್ಲಿ ಇರಿದು ಕೊಲೆ ಮಾಡಿದ್ದ ಕಾರಣ ಮರಣದಂಡನೆ ಶಿಕ್ಷೆಯ ತೀರ್ಪು ನೀಡಿದೆ. ಮುಂದಿನ ಇರಡು ವರ್ಷಗಳಲ್ಲಿ ಈತ ಉತ್ತಮ ಗುಣನಡತೆ ಪ್ರದರ್ಶಿಸಿದಲ್ಲಿ ಈತನ ಶಿಕ್ಷೆ ಕಡಿಮೆಗೊಳಿಸಿ ಜೀವಾವಧಿ ಶಿಕ್ಷೆ ನೀಡುವ ಸಾಧ್ಯತೆಗಳೂ ಇವೆ ಎಂದು ಚೀನಾದ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಝಾವೋ ಯಾನ್ ಹಾಗೂ ಗ್ಯು ಲಿವೇ ಜಿಲಿನ್ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿ್ದರು. ಇವರೀರ್ವರು ರೂಮ್‌ಮೇಟ್‌ಗಳಾಗಿದ್ದರು. ಈ ಹಿಂದೆಯೇ ಗ್ಯು ಲಿವೇ ತನ್ನ ರೂಂಮೇಟ್ ಝಾವೋ ಯಾನ್ ಗೊರಕೆ ಹೊಡೆಯುವ ದೃಶ್ಯಗಳನ್ನು ವಿಡಿಯೋ ಮಾಡಿ ಕಾಲೇಜಿನ ವೆಬ್‌ಸೈಟಿನಲ್ಲಿ ಹಾಕಿದ್ದ. ಇದು ಈ ಇಬ್ಬರಲ್ಲೂ ಜಗಳಕ್ಕೆ ಕಾರಣವಾಗಿತ್ತು.

ಈ ಬಗ್ಗೆ ತಪ್ಪೊಪ್ಪಿಕೊಂಡಿರುವ ಗ್ಯು ಲಿವೇ ಹೇಳುವಂತೆ, ನಾನು ಹೆಚ್ಚು ಗೊರಕೆ ಹೊಡೆಯಬೇಡ, ನನಗೆ ನಿದ್ದೆ ಬರುವುದಿಲ್ಲವೆಂದು ಅವನಿಗೆ ಸಾಕಷ್ಟು ಬಾರಿ ಹೇಳಿದ್ದೆ. ಪ್ರತಿ ಬಾರಿ ಹೇಳಿದಾಗಲೂ ಆತ ನನ್ನ ಮೇಲೆ ರೇಗುತ್ತಿದ್ದ. ಅವಾಚ್ಯ ಶಬ್ದಗಳಿಂದ ನನ್ನನ್ನು ಬೈಯುತ್ತಿದ್ದ. ಇದರಿಂದ ಕೋಪಗೊಂಡು ನಾನು ಅವನನ್ನು ಕೊಲೆ ಮಾಡಿದೆ ಎಂದು ಹೇಳಿದ್ದಾನೆ. ಜೊತೆಗೆ ತಾನು ತನ್ನ ಶಿಕ್ಷೆ ಕಡಿಮೆಗೊಳಿಸಬೇಕೆಂದು ಉನ್ನತ ನ್ಯಾಯಾಲಯಕ್ಕೆ ಅಪೀಲ್ ಹೋಗುವುದಿಲ್ಲ ಎಂದೂ ಆತ ತಿಳಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ