ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಜೊತೆ ಪರಮಾಣು ಒಪ್ಪಂದಕ್ಕೆ ಅಮೆರಿಕ ನಕಾರ? (Pakistan | America | Hilari Clinton)
Bookmark and Share Feedback Print
 
ಪಾಕಿಸ್ತಾನದ ಬಹು ನಿರೀಕ್ಷಿತ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕ ಸಹಮತ ವ್ಯಕ್ತಪಡಿಸುವ ಯಾವುದೇ ಸೂಚನೆಗಳು ಸಧ್ಯಕ್ಕೆ ಕಾಣಿಸುತ್ತಿಲ್ಲ.

ಪಾಕ್ ಹಾಗೂ ಅಮೆರಿಕ ಇದೇ ಮೊದಲ ಬಾರಿಗೆ ಸಂಪುಟ ದರ್ಜೆಯ ಮಾತುಕತೆ ನಡೆಸುತ್ತಿದ್ದು, ಮಾತುಕತೆಯ್ಲಲಿ ಶಾಂತಿ ಹಾಗೂ ಸ್ಥಿರತೆಯ ಬಗ್ಗೆ ಹೆಚ್ಚು ಮಹತ್ವ ನೀಡಲಾಗಿದೆ. ಜೊತೆಗೆ ಪಾಕಿಸ್ತಾನಕ್ಕೆ ಇಂಧನ ಕ್ಷೇತ್ರದಲ್ಲಿ ಸಹಾಯ ಮಾಡುವ ಭರವಸೆಯನ್ನು ಅಮೆರಿಕ ನೀಡಿದೆ.

ಪಾಕಿಸ್ತಾನ ಇಂಧನ ಕೊರತೆಯ ಸಮಸ್ಯೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಈ ಬಗ್ಗೆ ಅಮೆರಿಕ ಸಹಕಾರ ನೀಡುವ ಸೂಚನೆಯನ್ನೂ ನೀಡಿದ್ದರೂ, ನಿರೀಕ್ಷಿತ ನಾಗರಿಕ ಪರಮಾಣು ಒಪ್ಪಂದಕ್ಕೆ ಮಾತ್ರ ಅಂಥ ಉತ್ಸುಕತೆಯನ್ನೇನೂ ತೋರಿಲ್ಲ. ಹೀಗಾಗಿ ಒಪ್ಪದಿರುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗಿದೆ.

ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮದ್ ಖುರೇಷಿ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಶ್ಫಕ್ ಕಿಯಾನಿ ಭಾಗವಹಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ