ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್:ವೈಮಾನಿಕ ದಾಳಿಯಲ್ಲಿ 9 ಉಗ್ರರ ಬಲಿ (Military offensive | Taliban militants | Pakistan)
Bookmark and Share Feedback Print
 
ಪಾಕ್- ಅಫ್ಘಾನಿಸ್ತಾನ್ ಗಡಿಯಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಪಾಕಿಸ್ತಾನದ ಸೇನಾಪಡೆಗಳು ನಡೆಸಿದ ದಾಳಿಯಲ್ಲಿ, ಒಂಬತ್ತು ಉಗ್ರರು ಸಾವನ್ನಪ್ಪಿದ್ದಾರೆ. ಪ್ರಸಕ್ತ ವಾರದ ಅವಧಿಯಲ್ವಿ 100 ಉಗ್ರರನ್ನು ಹತ್ಯೆಮಾಡಲಾಗಿದೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.

ತಾಲಿಬಾನ್ ಉಗ್ರರ ಭಧ್ರಕೋಟೆಯಾದ ಒರ್ಕಾಝೈ ಪಟ್ಟಣವನ್ನು ಸೇನಾಪಡೆಗಳು ಸುತ್ತಿವರಿದಾಗ, ತಾಲಿಬಾನ್ ಉಗ್ರರು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದಲ್ಲಿರುವ ತಾಲಿಬಾನ್ ಉಗ್ರರನ್ನು ಹೊರದಬ್ಬಲು ಸೇನಾಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯಿಂದಾಗಿ, ತಾಲಿಬಾನ್ ಉಗ್ರರು ಇತರ ಅಡಗುತಾಣಗಳತ್ತ ತಮ್ಮ ಚಿತ್ತವನ್ನು ಹರಿಸುತ್ತಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸೇನಾಪಡೆಗಳು ಒರ್ಕಾಝೈ ಪಟ್ಟಣದ ಉಗ್ರರ ಅಡಗುತಾಣಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ,ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ,
ಸಂಬಂಧಿತ ಮಾಹಿತಿ ಹುಡುಕಿ