ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನಿಗಳು ಅಧಿಕಾರಕ್ಕೇರಲು ಪಾಕ್ ಬಯಸುವುದಿಲ್ಲ:ಖುರೇಶಿ (Afghan | Taliban | Pakistan | Shah Mehmood Qureshi)
Bookmark and Share Feedback Print
 
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರವಿದ್ದಾಗ ಬೆಂಬಲಿಸಿದ್ದ ಪಾಕಿಸ್ತಾನ, ಇದೀಗ ತಾಲಿಬಾನ್‌ಗಳು ದೇಶದ ಚುಕ್ಕಾಣಿ ಹಿಡಿಯುವುದನ್ನು ಬಯಸುವುದಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಹೇಳಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಶಾ ಮೆಹಮೂದ್ ಖುರೇಶಿ, ನೆರೆಯ ರಾಷ್ಟ್ರವಾದ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ದೇಶದ ಚುಕ್ಕಾಣಿ ಹಿಡಿಯುವುದಕ್ಕೆ ಪಾಕಿಸ್ತಾನ ಸರಕಾರ ಬೆಂಬಲಿಸುವುದಿಲ್ಲ. ಕರ್ಜೈ ಸರಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವ ಖುರೇಶಿ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರವಿದ್ದ ಸಮಯದಲ್ಲಿ,ಪಾಕಿಸ್ತಾನದೊಂದಿಗೆ ಉತ್ತಮ ಹೊಂದಾಣಿಕೆ ತೋರಿತ್ತು. ಆದರೆ ಇದೀಗ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿದ್ದರಿಂದ ತಾಲಿಬಾನಿಗಳು ಅಧಿಕಾರಕ್ಕೆ ಬರುವುದು ಪಾಕ್‌ ಬಯಸುವುದಿಲ್ಲವೆಂದರು.

1996ರಿಂದ ತಾಲಿಬಾನ್ ಸರಕಾರದ ಪ್ರಮುಖ ಬೆಂಬಲಿತ ರಾಷ್ಟ್ರವಾಗಿದ್ದ ಪಾಕಿಸ್ತಾನ, ಅಮೆರಿಕದಲ್ಲಿ ನಡೆದ ಉಗ್ರರ ದಾಳಿಯ ನಂತರ ಅಮೆರಿಕ- ಮಿತ್ರಪಡೆಗಳು ಅಫ್ಘನ್‌ ಮೇಲೆ ದಾಳಿ ಮಾಡಿ ತಾಲಿಬಾನಿಗಳನ್ನು ಹೊರದೂಡಿದ ನಂತರ ಪಾಕ್ ನಿಲುವಿನಲ್ಲಿ ಬದಲಾವಣೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ