ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಂಗೋ ಬಂಡುಕೋರರಿಂದ 320 ನಾಗರಿಕರ ಹತ್ಯೆ (massacre in Congo | human rights | LRA | Africa)
Bookmark and Share Feedback Print
 
2009ರಲ್ಲಿ ಲಾರ್ಡ್ಸ್ ರೆಸಿಟೆನ್ಸ್ ಬಂಡುಕೋರ ಸಂಘಟನೆ ಕಾಂಗೋದಲ್ಲಿ ಸುಮಾರು 321 ನಾಗರಿಕರನ್ನು ಹತ್ಯೆಗೈದಿರುವುದಾಗಿ ಮಾನವ ಹಕ್ಕು ಸಂಘಟನೆ ಆರೋಪಿಸಿದೆ.

ಈ ಬಂಡುಕೋರರ ಸಂಘಟನೆ ಕನಿಷ್ಠ 250ಜನರನ್ನು ಅಪಹರಿಸಿರುವುದಾಗಿಯೂ ನ್ಯೂಯಾರ್ಕ್ ಮೂಲದ ಮಾನವ ಹಕ್ಕು ಕಣ್ಗಾವಲು ಸಂಸ್ಥೆ ಅಂಕಿ-ಅಂಶ ಸಹಿತ ವಿವರಿಸಿದೆ. ಅಲ್ಲದೇ ಕಾಂಗೋ ಈಶಾನ್ಯ ಪ್ರದೇಶದ ಮಾಕಾಂಬೋದಲ್ಲಿ 80ಮಕ್ಕಳನ್ನು ಹತ್ಯೆಗೈದಿರುವುದಾಗಿ ದೂರಿದೆ.

ಕಳೆದ 23ವರ್ಷಗಳ ಇತಿಹಾಸದಲ್ಲಿಯೇ ಲಾರ್ಡ್ಸ್ ರೆಸಿಟೆನ್ಸ್ ಬಂಡುಕೋರ ಸಂಘಟನೆ ನಡೆಸಿದ ಅತ್ಯಂತ ಹೇಯ ಘಟನೆ ಇದಾಗಿದೆ ಎಂದು ಆಫ್ರಿಕಾದ ಹಿರಿಯ ಸಂಶೋಧಕ ಅನ್ನೆಕೆ ವಾನ್ ವುಂಡೆನ್‌ಬೆರ್ಗ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

2009ರ ಡಿಸೆಂಬರ್ 14ರಿಂದ 17ರವರೆಗೆ ಈ ಸಂಘಟನೆ 10 ಹಳ್ಳಿಗಳನ್ನು ಗುರಿಯಾಗಿರಿಸಿಕೊಂಡು ಈ ಹತ್ಯಾಕಾಂಡ ನಡೆಸಿರುವುದಾಗಿ ಮಾನವ ಹಕ್ಕು ಸಂಘಟನೆ ದೂರಿದೆ.

ಎಲ್‌ಆರ್ಎ ಉಗಾಂಡ ಮೂಲದ ಬಂಡುಕೋರ ಚಳವಳಿ ಸಂಘಟನೆಯಾಗಿದೆ, ಅಲ್ಲಿಂದ ಹೊರಬಿದ್ದ ನಂತರ ಈ ಬಂಡುಕೋರರು, ಕಾಂಗೋ ಗಡಿಪ್ರದೇಶ ಹಾಗೂ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಪ್ರದೇಶದಲ್ಲಿ ಅಟ್ಟಹಾಸಗೈಯುತ್ತಿರುವುದಾಗಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ