ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೆಕ್ಸಿಕೋ: ಪೊಲೀಸ್ ಮುಖ್ಯಸ್ಥನ ರುಂಡ ಕಡಿದು ಹತ್ಯೆ (Mexico | Drug maffia | Police | Gulf drug cartell)
Bookmark and Share Feedback Print
 
ಮಾದಕ ದ್ರವ್ಯ ಮಾರಾಟಗಾರರು ಉತ್ತರ ಮೆಕ್ಸಿಕೋದ ಪೊಲೀಸ್ ಮುಖ್ಯಸ್ಥರೊಬ್ಬರ ರುಂಡ ಕಡಿದು ಹತ್ಯೆ ಮಾಡಿದ ಅಮಾನವೀಯ ಘಟನೆ ನಡೆದಿದೆ.

ಕೆಲವು ದಿನಗಳ ಹಿಂದಷ್ಟೇ ಈ ಪೊಲೀಸ್ ಮುಖ್ಯಸ್ಥರನ್ನು ಅಪಹರಿಸಲಾಗಿತ್ತು. ನಂತರ ಶನಿವಾರ ರುಂಡ ಮತ್ತು ಮುಂಡ ಬೇರೆಯಾದ ಶವವೊಂದನ್ನು ಟ್ರಕ್‌ನಲ್ಲಿ ತಂದು ಎಸೆದು ಹೋಗಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ, ಪೊಲೀಸ್ ಮುಖ್ಯಸ್ಥನ ವಾಹನದಲ್ಲಿ ಅವರ ಸಹೋದರನ ಶವ ಕೂಡ ಪತ್ತೆಯಾಗಿತ್ತು. ವಾಹನದ ಬಾಗಿಲ ಮೇಲೆ ಗಲ್ಫ್ ಡ್ರಗ್ ಕಾರ್ಟೇಲ್ ಎಂದು ಬರೆಯಲಾಗಿತ್ತು. ಆ ನಿಟ್ಟಿನಲ್ಲಿ ಈ ದುಷ್ಕೃತ್ಯವನ್ನು ಅಕ್ರಮ ಮಾದಕ ವಸ್ತು ಮಾರಾಟಗಾರರೇ ಮಾಡಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ