ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಹಿಳೆಯರ ನೇಮಕಕ್ಕೆ ಉಗ್ರರಿಂದ ಇಂಟರ್ನೆಟ್ ಬಳಕೆ! (Jihad war | Terrorists | Internet | Women recruitment | al Qaeda)
Bookmark and Share Feedback Print
 
ಹಮಾಸ್ ಸೇರಿದಂತೆ ಹಲವು ಉಗ್ರಗಾಮಿ ಸಂಘಟನೆಗಳು ಭಯೋತ್ಪಾದನಾ ಚಟುವಟಿಕೆ ನಡೆಸಲು ಯುವತಿಯರನ್ನು ಆಯ್ಕೆ ಮಾಡಲು ವೆಬ್‌ಸೈಟ್ ಬಳಕೆ ಮಾಡುತ್ತಿರುವುದಾಗಿ ಸಂಶೋಧಕರೊಬ್ಬರು ಪತ್ತೆ ಹಚ್ಚಿರುವುದಾಗಿ ನೂತನ ವರದಿಯೊಂದು ತಿಳಿಸಿದೆ.

ಇಂಟರ್ನೆಟ್ ಟೆರರಿಸಂ ವಿಷಯದ ಕುರಿತು ಎಕ್ಸ್‌ಫರ್ಟ್ ಆಗಿರುವ ಹಾಫಿಯಾ ಯೂನಿರ್ವಸಿಟಿ ಪ್ರೊಫೆಸರ್ ಗೇಬ್ರಿಯಲ್ ವೈಮನ್ನ ಅವರನ್ನು ಸಂಶೋಧಕರು ಈ ಬಗ್ಗೆ ಪ್ರಶ್ನಿಸಿದ್ದರು.

ಈ ಉಗ್ರಗಾಮಿ ಸಂಘಟನೆಗಳು ಯುವತಿಯರನ್ನು ನೇಮಕ ಮಾಡಿಕೊಂಡು ಮಹಿಳಾ ಆತ್ಮಹತ್ಯಾ ಉಗ್ರರ ಸಂಖ್ಯೆಯನ್ನು ಹೆಚ್ಚಳ ಮಾಡುವ ಗುರಿ ಇಟ್ಟುಕೊಂಡಿವೆ. ಆ ಕಾರಣಕ್ಕಾಗಿಯೇ ಯುವತಿಯರನ್ನು ನೇಮಕ ಮಾಡಿಕೊಳ್ಳಲು ಉಗ್ರಗಾಮಿ ಸಂಘಟನೆಗಳು ವೆಬ್ ಸೈಟ್ ಮೊರೆ ಹೋಗಿವೆ.

ಸುಮಾರು ಒಂದು ದಶಕ್ಕೂ ಹೆಚ್ಚು ಕಾಲ ಇಂಟರ್ನೆಟ್ ಸೈಟ್ಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಎಲ್ಲಾ ಭಯೋತ್ಪಾದನಾ ಸಂಘಟನೆಗಳ ಬಗ್ಗೆ ಕೂಲಂಕಷವಾಗಿ ವಿಶ್ಲೇಷಿಸುವ ಮೂಲಕ ಈ ವೈಮನ್ನ ಈ ಮಾಹಿತಿಯನ್ನು ಹೊರಗೆಡವಿದ್ದಾರೆ.

2004ರಲ್ಲಿ ಅಲ್ ಖಾಯಿದಾ ಸಂಘಟನೆ ಮೊದಲ ಬಾರಿಗೆ ಮಹಿಳೆಯರಿಗಾಗಿ ಆನ್‌ಲೈನ್ ಮ್ಯಾಗಜೀನ್ ಆರಂಭಿಸಿದ ನಂತರ ಉಗ್ರಗಾಮಿ ಸಂಘಟನೆಗಳ ಇಂಟರ್ನೆಟ್ ಪ್ರವೃತ್ತಿ ಹೆಚ್ಚಾಗಿರುವುದಾಗಿ ಅವರು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ