ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಷ್ಯಾದಲ್ಲಿ ಪ್ರಬಲ ಅವಳಿ ಬಾಂಬ್ ಸ್ಫೋಟಕ್ಕೆ 40ಬಲಿ (Moscow | twin blasts | Russia | terrorism | ubyanka station)
Bookmark and Share Feedback Print
 
ಸೆಂಟ್ರಲ್ ಮಾಸ್ಕೋದ ಮೆಟ್ರೋ ಸ್ಟೇಶನ್ ಸಮೀಪ ಎರಡು ಪ್ರಬಲ್ ಬಾಂಬ್ ಸ್ಫೋಟಿಸಿದ ಪರಿಣಾಮ 40ಮಂದಿ ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡಿರುವ ಘಟನೆ ಸೋಮವಾರ ರಷ್ಯಾದಲ್ಲಿ ಸಂಭವಿಸಿದೆ.

ಎರಡು ಪ್ರತ್ಯೇಕ ಬಾಂಬ್ ಸ್ಫೋಟ ಸಂಭವಿಸಿದ ನಂತರ ಇದು ಭಯೋತ್ಪಾದನಾ ಘಟನೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಮಾಸ್ಕೋದ ಲುಬ್ಯಾಂಕಾ ರೈಲ್ವೆ ಸ್ಟೇಶನ್‌ನಲ್ಲಿ ಸಂಭವಿಸಿದ ಮೊದಲ ಸ್ಫೋಟದಲ್ಲಿ 14ಮಂದಿ ರೈಲಿನಲ್ಲಿದ್ದವರು ಸಾವನ್ನಪ್ಪಿದ್ದು, ಪ್ಲ್ಯಾಟ್‌ಫಾರಂನಲ್ಲಿ ನಿಂತಿದ್ದ 11ಮಂದಿ ಕೂಡ ಬಲಿಯಾಗಿರುವುದಾಗಿ ಎಮರ್ಜೆನ್ಸಿ ಸಚಿವಾಲಯದ ವಕ್ತಾರೆಯಾದ ಐರಿನಾ ಅಂಡ್ರಿನೋವಾ ವಿವರಿಸಿದ್ದಾರೆ.

ಸುಮಾರು 45ನಿಮಿಷಗಳ ನಂತರದ ಪಾರ್ಕ್ ಕುಲ್‌ಟ್ರೈ ಸ್ಟೇಷನ್‌ನಲ್ಲಿ ಎರಡನೇ ಸ್ಫೋಟಕ್ಕೆ 15ಮಂದಿ ಸಾವನ್ನಪ್ಪಿರುವುದಾಗಿ ಸ್ಟೇಟ್ ನ್ಯೂಸ್ ಏಜೆನ್ಸಿಯಾದ ಐಟಿಎರ್-ಟಾಸ್ ಹಾಗೂ ಆರ್ಐಎ ನೋವಿಸ್ಟಿ ವರದಿ ಹೇಳಿದೆ. ಆದರೆ ಘಟನೆಯಲ್ಲಿ ಸಾವನ್ನಪ್ಪಿದವರು ಸಂಖ್ಯೆ ನಿಖರವಾಗಿ ತಿಳಿದು ಬಂದಿಲ್ಲ ಎಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ