ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾಜಿ ಬ್ಯೂಟಿ ಕ್ವೀನ್‌ ಈಗ ಮಾದಕ ದ್ರವ್ಯ ಸಾಗಾಟದ ಕಳ್ಳಿ! (Former Columbian beauty | Red Corner | Sanclemente Valencia | Interpol)
Bookmark and Share Feedback Print
 
ಕೊಲಂಬಿಯಾದ ಮಾಜಿ ಸುಂದರಿಯೊಬ್ಬಳು ಇದೀಗ ಅಕ್ರಮ ಮಾದಕ ದ್ರವ್ಯಗಳ ಸಾಗಾಣೆ ಮಾಡುತ್ತಿರುವ ಆರೋಪ ಹೊತ್ತಿದ್ದು, ಮೋಸ್ಟ್ ವಾಟೆಂಡ್ ಲಿಸ್ಟ್‌ನಲ್ಲಿ ಇರುವುದಾಗಿ ಡ್ರಗ್ ಎನ್‌ಫೋರ್ಸ್‌ಮೆಂಟ್ ಏಜೆನ್ಸಿ ತಿಳಿಸಿದೆ.

ಮಾಜಿ ಸುಂದರಿಯಾಗಿರುವ ಸಾನ್‌ಕ್ಲೆಮೆಂಟೆ ವಾಲೆನ್ಸಿಯಾ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಕೊಲಂಬಿಯಾದ ರೂಪದರ್ಶಿಯಾಗಿ ಹೆಸರು ಮಾಡಿರುವ ವಾಲೆನ್ಸಿಯಾ 2000ನೇ ಇಸವಿಯಲ್ಲಿ ನಡೆದ ಕ್ವೀನ್ ಆಫ್ ಕಾಫೆ ಸ್ಪರ್ಧೆಯಲ್ಲಿ ಸುಂದರಿ ಎಂಬ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಇದೀಗ ಮಾದಕ ದ್ರವ್ಯ ಸಾಗಾಟ ಜಾಲದ ಪ್ರಮುಖ ರೂವಾರಿಯಾಗಿರುವ ಈಕೆ ವಿರುದ್ಧ ಇಂಟರ್ ಪೋಲ್ ಬಂಧನದ ವಾರಂಟ್ ಜಾರಿ ಮಾಡಿದೆ.

ವಾಲೆನ್ಸಿಯಾ ಬ್ಯೂನಸ್ ಐರಿಸ್‌ನಿಂದ ಹಲವಾರು ಯುರೋಪಿಯನ್ ದೇಶಗಳಿಗೆ ಕೊಕೇನ್ ಸಾಗಾಟ ಮಾಡುತ್ತಿರುವುದಾಗಿ ಮಿಯಾಮಿ ಹೆರಾಲ್ಡ್ ವರದಿ ಹೇಳಿದೆ.

2009ರಲ್ಲಿ ಕಾನ್‌ಕನ್‌ನಿಂದ ವಾಲೆನ್ಸಿಯಾ ಪ್ರಯಾಣಿಸುತ್ತಿದ್ದ ವೇಳೆ ಆಕೆಯ ಸೂಟ್‌ಕೇಸ್‌ನಲ್ಲಿ 55ಕಿಲೋ ಕೊಕೇನ್ ಇರುವುದನ್ನು ಅರ್ಜೈಂಟೀನಾ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ನಂತರ ಆಕೆಯನ್ನು ಬಂಧಿಸಬೇಕೆಂದು ಆಕೆ ಠಿಕಾಣಿ ಹೂಡಿದ್ದ ಹೋಟೆಲ್ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಪರಾರಿಯಾಗಿದ್ದಳು.

ಆ ನಿಟ್ಟಿನಲ್ಲಿ ವಾಲೆನ್ಸಿಯಾ ಡ್ರಗ್ ಮಾಫಿಯಾದಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಆರೋಪಿಯಾಗಿದ್ದು, ಆಕೆಯನ್ನು ಕಂಡಲ್ಲಿ, ಇಂಟರ್ ಪೋಲ್ ಅಥವಾ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಇಂಟರ್‍‌ಪೋಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ