ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದುಬೈ: ಪಾಕಿಸ್ತಾನಿ ಹತ್ಯೆ-17 ಭಾರತೀಯರಿಗೆ ಗಲ್ಲು ಶಿಕ್ಷೆ (Indians sentence | Pakistan | Sharjah's Shariah Court | Judge Yousuf)
Bookmark and Share Feedback Print
 
ಕಳೆದ ವರ್ಷ ಪಾಕಿಸ್ತಾನಿಯೊಬ್ಬನ ಮೇಲೆ ಕ್ರೂರವಾಗಿ ದಾಳಿ ನಡೆಸಿ, ಹತ್ಯೆಗೈದ ಆರೋಪದ ಮೇಲೆ 17ಮಂದಿ ಭಾರತೀಯರಿಗೆ ಇಲ್ಲಿನ ಶಾರ್ಜಾ ಷಾರಿಯಾ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.

ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಸಾಕ್ಷ್ಯ, ಡಿಎನ್‌ಎ ಪರೀಕ್ಷೆಗಳ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ನ್ಯಾಯಾಧೀಶ ಯೂಸೂಫ್ ಅಲ್ ಹಮಾದಿ ಅವರು ಈ ಶಿಕ್ಷೆಯನ್ನು ವಿಧಿಸಿರುವುದಾಗಿ ಖಲೀಜ್ ಟೈಮ್ಸ್ ವರದಿ ತಿಳಿಸಿದೆ.

ಪಾಕಿಸ್ತಾನಿ ಪ್ರಜೆಯ ಮೇಲೆ ದಾಳಿ ನಡೆಸಿ, ಆತನ ದೇಹದ ವಿವಿಧ ಭಾಗಕ್ಕೆ ಚೂರಿಯಿಂದ ಇರಿಯಲಾಗಿತ್ತು. ಅಲ್ಲದೇ ಆತನ ಮೆದುಳಿಗೂ ಕೂಡ ಗಂಭೀರವಾಗಿ ಹಾನಿಗೊಂಡಿತ್ತು. ನಂತರ ಆ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಶಾರ್ಜಾದ ಸಾಜಾ ಪ್ರದೇಶದಲ್ಲಿ ಅಕ್ರಮ ಮದ್ಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿತ್ತು ಎಂದು ವರದಿ ಹೇಳಿದೆ.

ಈ ಸಂದರ್ಭದಲ್ಲಿ ಹಲ್ಲೆ ನಡೆಸಿದ ವ್ಯಕ್ತಿಗಳು ಮತ್ತೆ ಮೂವರ ಮೇಲೂ ಗಂಭೀರವಾಗಿ ದಾಳಿ ನಡೆಸಿ, ಪರಾರಿಯಾಗಲು ಸಫಲರಾಗಿದ್ದರು. ನಂತರ ಗಾಯಗೊಂಡವರನ್ನು ಕುವೈಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮರಣದಂಡನೆಗೆ ಒಳಗಾದ ಆರೋಪಿಗಳು 17ರಿಂದ 30ವರ್ಷದವರಾಗಿದ್ದಾರೆ.

ಸುಮಾರು 50ಮಂದಿ ದಾಳಿಯಲ್ಲಿ ಭಾಗಿಯಾಗಿದ್ದರು, ಇದರಲ್ಲಿ 17ಮಂದಿ ಮಾತ್ರ ದೋಷಿತರಾಗಿದ್ದು, ಉಳಿದವರ ವಿರುದ್ಧ ಸರಿಯಾದ ಸಾಕ್ಷ್ಯಾಧಾರ ಇಲ್ಲದ ಕಾರಣ ಅವರೆಲ್ಲಾ ಶಿಕ್ಷೆಯಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ