ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಪಾಕ್ ತಾಲಿಬಾನ್‌ನಿಂದ ಅಮೆರಿಕ ರಾಯಭಾರಿ ಅಪಹರಣ ಸಂಚು' (Pak Taliban | kidnap | US | Afghan diplomats | Tehreek-e-Taliban Pakistan)
Bookmark and Share Feedback Print
 
ಪಾಕಿಸ್ತಾನದ ತೆಹ್ರೀಕ್ ಇ ತಾಲಿಬಾನ್(ಟಿಟಿಪಿ) ಉಗ್ರಗಾಮಿ ಸಂಘಟನೆ, ಅಮೆರಿಕ ಮತ್ತು ಅಫ್ಘಾನಿಸ್ತಾನದ ರಾಯಭಾರಿಗಳನ್ನು ಅಪಹರಿಸುವ ಸಂಚು ರೂಪಿಸಿರುವುದಾಗಿ ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಎಚ್ಚರಿಸಿದೆ. ಅಲ್ಲದೇ ಬಂಧಿತ ಉಗ್ರರನ್ನು ಶೀಘ್ರವೇ ಬಿಡುಗಡೆಗೊಳಿಸಲು ಸೂಚನೆ ನೀಡಿದೆ.

ಬಂಧಿತ ಉಗ್ರರನ್ನು ಬಿಡುಗಡೆಗೊಳಿಸಬೇಕು ಎಂದು ಬೇಡಿಕೆ ಇಟ್ಟಿರುವ ತಾಲಿಬಾನ್, ಮುಂದಿನ ಕೆಲವು ದಿನಗಳಲ್ಲಿಯೇ ಇಸ್ಲಾಮಾಬಾದ್, ರಾವಲ್ಪಿಂಡಿ ಹಾಗೂ ಲಾಹೋರ್ ಮೇಲೆ ಖ್ವಾರಿ ನೇತೃತ್ವದ (ಕೋಡ್ ನೇಮ್) ಭಯೋತ್ಪಾದನಾ ಸಂಘಟನೆ ದಾಳಿ ನಡೆಸುವ ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಆ ನಿಟ್ಟಿನಲ್ಲಿ ಇಸ್ಲಾಮಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಿಗಿ ಭದ್ರತೆಯನ್ನು ಹೆಚ್ಚಿಸಲು ಕಾನೂನು ಸಚಿವಾಲಯ ಸೂಚನೆ ನೀಡಿರುವುದಾಗಿ ಹೇಳಿದೆ.

ಆದರೆ ರಾಯಭಾರಿ ಮತ್ತು ಉನ್ನತಾಧಿಕಾರಿಗಳನ್ನು ಉಗ್ರಗಾಮಿ ಸಂಘಟನೆಗಳು ಅಪಹರಿಸಲಿದ್ದಾರೆಂದು ಗುಪ್ತಚರ ಇಲಾಖೆ ನೀಡುವ ಮೊದಲ ಎಚ್ಚರಿಕೆಯೇನೂ ಅಲ್ಲ, ಈ ಹಿಂದೆಯೂ ಸಾಕಷ್ಟು ಬಾರಿ ಇದೆ ಎಚ್ಚರಿಕೆಯನ್ನು ನೀಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ