ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭ್ರಷ್ಟಾಚಾರ: ಲಂಡನ್‌ನಲ್ಲಿ ಅಫ್ಘಾನ್ ಮಾಜಿ ಸಚಿವನ ಬಂಧನ? (Afghanistan | corruption | Mohammad Siddiq Chakari | warrant)
Bookmark and Share Feedback Print
 
ಭ್ರಷ್ಟಾಚಾರದ ಆರೋಪದ ಮೇಲೆ ಮಾಜಿ ಸಚಿವನ ವಿರುದ್ಧ ಅಫ್ಘಾನ್ ಅಧಿಕಾರಿಗಳು ಬಂಧನದ ವಾರಂಟ್ ಜಾರಿಗೊಳಿಸಿದ್ದು, ಅಲ್ಲದೇ ಸಚಿವರ ಬಂಧನದ ವರದಿಯ ಹಿನ್ನೆಲೆಯಲ್ಲಿ ಬ್ರಿಟನ್‌ನಿಂದ ಹಸ್ತಾಂತರಿಸುವಂತೆ ಎದುರು ನೋಡಲಾಗುತ್ತಿದೆ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.

ಹಜ್ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವನಾಗಿದ್ದ ಮೊಹಮ್ಮದ್ ಸಿದ್ದಿಕ್ ಚಾಕ್ರಿ, ಕಳೆದ ವರ್ಷ ಸೌದಿ ಅರೇಬಿಯಾದಲ್ಲಿ ವಿದೇಶಿ ಕ್ಯಾಟರಿಂಗ್ ಕಂಪನಿಯೊಂದರಿಂದ ಕೋಟ್ಯಂತರ ರೂಪಾಯಿ ಲಂಚ ಸ್ವೀಕರಿಸಿದ್ದಾರೆಂದು ಅಫ್ಘಾನಿಸ್ತಾನದ ಸಹಾಯಕ ಅಟಾರ್ನಿ ಜನರಲ್ ಫಾಜಿಲ್ ಅಹ್ಮದ್ ಫಾಕಿರ್‌ಯಾರ್ ಸುದ್ದಿಸಂಸ್ಥೆಯೊಂದಕ್ಕೆ ವಿವರಿಸಿದ್ದಾರೆ.

ಸಚಿವ ಚಾಕ್ರಿಯ ಬಂಧನದ ವಿಷಯ ಖಚಿತವಾಗಿದ್ದೆ ಹೌದಾದರೆ, ಅಫ್ಘಾನಿಸ್ತಾನ ಭ್ರಷ್ಟಾಚಾರ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಅಫ್ಘಾನ್ ಮಹತ್ವದ ಹೆಜ್ಜೆ ಇಟ್ಟಂತಾಗಲಿದೆ ಎಂದಿರುವ ಅಟಾರ್ನಿ, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಸುಮಾರು 17ಸಚಿವರ ವಿರುದ್ಧವೂ ತನಿಖೆ ನಡೆಸಲಾಗುತ್ತಿದೆ ಎಂದರು.

ಯಾವುದೇ ಅನುಮತಿ ಇಲ್ಲದೇ ದೇಶ ಬಿಟ್ಟು ತೆರಳದಂತೆ ಚಾಕ್ರಿ ವಿರುದ್ಧ ವಾರಂಟ್ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.ನಾವು ಸೋಮವಾರ ಬೆಳಿಗ್ಗೆಯಷ್ಟೇ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯನ್ನು ನೋಡಿದೆವು, ಅದರಲ್ಲಿ ಚಾಕ್ರಿಯನ್ನು ಬಂಧಿಸಿರುವುದಾಗಿ ತಿಳಿಸಿದೆ. ಮಾಜಿ ಸಚಿವ ಚಾಕ್ರಿಯನ್ನು ಲಂಡನ್ ಸಮೀಪ ಬಂಧಿಸಲಾಗಿತ್ತು. ಆದರೆ ಬಂಧನದ ವಿಷಯ ಇನ್ನೂ ಖಚಿತವಾಗಿಲ್ಲ.

ಬಂಧನವಾಗಿದ್ದರೆ ಚಾಕ್ರಿಯನ್ನು ಅಫ್ಘಾನಿಸ್ತಾನಕ್ಕೆ ಹಸ್ತಾಂತರಿಸುವಂತೆ ಸರ್ಕಾರ ಮನವಿ ಮಾಡಿದ್ದು, ಚಾಕ್ರಿಯ ವಿರುದ್ಧ ಆರೋಪ ಪಟ್ಟಿ ದಾಖಲಿಸಿ ಅಫ್ಘಾನ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಫಾಕಿರ್‌ಯಾರ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ